ವಿಜಯವಾಣಿ ಸುದ್ದಿಜಾಲ ನರಗುಂದ
ಕ್ರೀಡೆಗಳು ಜನರ ಮನಸನ್ನು ಬೆಸೆಯುವುದ ರೊಂದಿಗೆ ಸೌಹಾರ್ದ ಗಟ್ಟಿಗೊಳಿಸುತ್ತವೆ. ಪೊ› ಕಬಡ್ಡಿ ಮಾದರಿಯಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದರಿಂದ ಮತಕ್ಷೇತ್ರದ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಬಿಜೆಪಿ, ಲಯನ್ಸ್ ಕ್ಲಬ್, ಸಿ.ಸಿ. ಪಾಟೀಲ ಅಭಿಮಾನಿ ಬಳಗದವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ 3ನೇ ದಿನವಾದ ಶುಕ್ರವಾರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅವರು ಮಾತನಾಡಿದರು.
‘ಕಬಡ್ಡಿ ಪಂದ್ಯಾವಳಿಯನ್ನು ಈ ಹಿಂದೆ ಹಳ್ಳಿಹಳ್ಳಿಗಳಲ್ಲಿ ಆಯೋಜಿಸಲಾಗುತ್ತಿತ್ತು. ವಿಜೇತರಿಗೆ ದವಸ, ಧಾನ್ಯ, ಬೆಳ್ಳಿ ಖಡ್ಗ ಬಹುಮಾನ ನೀಡಲಾಗುತ್ತಿತ್ತು. ಹತ್ತಾರು ಊರಿನ ಜನ ಒಂದೇ ಕಡೆ ಸೇರಿ ಅತ್ಯಂತ ಅದ್ದೂರಿಯಾಗಿ ಕೂಟ ಆಯೋಜಿಸುತ್ತಿದ್ದರು. ಇದರಿಂದಾಗಿ ಇಲ್ಲಿನ ಮಣ್ಣಿನ ಪ್ರತಿ ಕಣಕಣದಲ್ಲೂ ಕಬಡ್ಡಿಯ ಸತ್ವ ಗುಣವಿದೆ’ ಎಂದರು.
ದೇಸಿ ಕ್ರೀಡೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಥಾನಮಾನ ದೊರೆಯಬೇಕು. ಯುವ ಕ್ರೀಡಾ ಆಸಕ್ತರಿಗೆ ವಿಶೇಷ ಪೋ›ತ್ಸಾಹ ನೀಡಲು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಇಂಡಿಯನ್ ನೇವಿ, ಆರ್ವಿು, ರೈಲ್ವೆ ಸೇರಿದಂತೆ ದೇಶದ ಪ್ರತಿಷ್ಠಿತ ಬ್ಯಾಂಕ್ಗಳ ಕಬಡ್ಡಿ ತಂಡಗಳು. ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರ ಅವಿರತ ಪರಿಶ್ರಮದಿಂದ ಸಾಧ್ಯವಾಗಿದೆ ಎಂದರು.
ಜಿ.ಟಿ. ಗುಡಿಸಾಗರ, ರಮೇಶಗೌಡ ಕರಕನಗೌಡ್ರ, ಬಸವರಾಜ ಪಾಟೀಲ, ಶೋಭಾ ಪಾಟೀಲ, ಮಹೇಶಗೌಡ ಪಾಟೀಲ, ಸಂಗನಗೌಡ ಪಾಟೀಲ, ಸ್ನೇಹಾ ಪಾಟೀಲ, ನಾಗರಾಜ ನೆಗಳೂರ, ಚನ್ನಯ್ಯ ಸಂಗಳಮಠ, ಮೋಹನ ಕಲಹಾಳ, ಸಿದ್ದೇಶ ಹೂಗಾರ, ಸಂತೋಷ ಹಂಚಿನಾಳ, ವಿಠ್ಠಲ ಹವಾಲ್ದಾರ, ಶಿವರಾಜ ಕಲ್ಲಾಪೂರ, ಮಂಜುನಾಥ ಮೆಣಸಗಿ, ಕೊಟ್ರೇಶ ಕೊಟ್ರಶೆಟ್ಟಿ ಇತರರಿದ್ದರು.
ಸಿಸಿಪಿ ಅಭಿಮಾನಿ ಬಳಗಕ್ಕೆ ಜಯ: ನರಗುಂದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರನೇ ದಿನದ ಕಬಡ್ಡಿ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶ ಹಾಗೂ ಗದಗ ಜಿಲ್ಲೆಯ ಸಿ.ಸಿ. ಪಾಟೀಲ ಅಭಿಮಾನಿ ಬಳಗ ತಂಡದ ನಡುವೆ ರೋಚಕ ಹಣಾಹಣೆ ನಡೆಯಿತು. ಕೊನೆಗೆ ಸಿ.ಸಿ. ಪಾಟೀಲ ಅಭಿಮಾನಿ ಬಳಗದ ಕಬಡ್ಡಿ ತಂಡ 46-22 ಅಂಕದೊಂದಿಗೆ ಜಯಶಾಲಿಯಾಯಿತು. ಸಚಿವ ಸಿ.ಸಿ. ಪಾಟೀಲ ಅವರು ಪತ್ನಿ ಶೋಭಾ ಪಾಟೀಲ ಹಾಗೂ ಕುಟುಂಬದವರೊಂದಿಗೆ ಪಂದ್ಯ ವೀಕ್ಷಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಸಚಿವ ಸಿ.ಸಿ. ಪಾಟೀಲರ ಕ್ರೀಡಾಭಿಮಾನ ಮತ್ತು ಪೋ›ತ್ಸಾಹ ಉತ್ತರ ಕರ್ನಾಟಕದ ಪ್ರತಿಯೊಬ್ಬ ಜನಪ್ರತಿನಿಧಿಗೆ ಮಾದರಿಯಾಗಬೇಕು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಿಗೆ ಊಟ, ವಸತಿ, ವಾಹನ ಸೌಲಭ್ಯ ಕಲ್ಪಿಸಿಕೊಡುವುದರ ಮೂಲಕ ಸ್ಥಳೀಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಹೀಗೂ ನಡೆಸಬಹುದು ಎಂಬುದನ್ನು ಸಿ.ಸಿ. ಪಾಟೀಲ ಅವರು ತೋರಿಸಿದ್ದಾರೆ. ಅತ್ಯಂತ ಶಿಸ್ತು, ಅಚ್ಚುಕಟ್ಟಾಗಿ ನಡೆದಿರುವ ಪಂದ್ಯಾವಳಿಗಳು ಪ್ರತಿಯೊಬ್ಬ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಸಿ.ಹೊನ್ನಪ್ಪಗೌಡಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು
ಸಚಿವ ಸಿ.ಸಿ. ಪಾಟೀಲರ ಅಭಿಮಾನಿ ಬಳಗದವರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕರು, ಕ್ರೀಡಾ ಆಸಕ್ತರಿಗೆ ಸಾಕಷ್ಟು ಸ್ಪೂರ್ತಿ, ಪೋ›ತ್ಸಾಹ ಮತ್ತು ಪ್ರೇರಣೆ ನೀಡಿದ್ದಾರೆ. ಪೊ› ಕಬಡ್ಡಿ ಮಾದರಿಯಲ್ಲಿ ಉತ್ತರ ಕರ್ನಾಟಕದದಲ್ಲಿಯೇ ಪ್ರಥಮ ಬಾರಿಗೆ ಅಖಿಲ ಭಾರತ ಪುರುಷ ಹಾಗೂ ಮಹಿಳಾ ಎ ಶ್ರೇಣಿಯ ಆಹ್ವಾನಿತ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.ಬ್ರಹ್ಮಾರೆಡ್ಡಿ ಆಂಧ್ರಪ್ರದೇಶ ತಂಡದ ಕಬಡ್ಡಿ ಕ್ರೀಡಾಪಟು