ಹನೂರು: ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಭಾನುವಾರ ಕ್ರಿಮಿನಾಶಕಪೂರಿತ ಮೇವು ತಿಂದು 2 ಹಸುಗಳು ಮೃತಪಟ್ಟಿವೆ.
ಗ್ರಾಮದ ಶಿವಕುಮಾರ್ ಎಂಬುವರಿಗೆ ಸೇರಿದ 2 ಹಸುಗಳು ಬೆಳಗ್ಗೆ ದಿಢೀರನೇ ನಿತ್ರಾಣಗೊಂಡು ಮೃತಪಟ್ಟಿವೆ. ಈ ಬಗ್ಗೆ ಪಶು ಇಲಾಖೆಯ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಂಗಾಂಗ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ವಿಷಪೂರಿತ ಆಹಾರ ಸೇವನೆಯಿಂದ ಹಸುಗಳು ಮೃತಪಟ್ಟಿವೆ ತಿಳಿದು ಬಂದಿದೆ.
ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಹಸುಗಳ ಸಾವು ಮೇಲ್ನೋಟಕ್ಕೆ ಕ್ರಿಮಿನಾಶಪೂರಿತ ಮೇವಿನ ಸೇವನೆಯಿಂದಾಗಿದೆ ಎಂದರು. ಮೃತ ಹಸುಗಳಿಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ತಿಳಿಸಿದರು.