ಜಿಲ್ಲೆ

ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದವರ ಬಂಧನ

ಸುಭಾಸ ಹೆಗಡೆ ಧೂಪದಹೊಂಡ

ಭಟ್ಕಳ: ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಬೆಟ್ಟಿಂಗ್​ನಲ್ಲಿ ತೊಡಗಿದ್ದ 7 ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿ ವಶಕ್ಕೆ ಪಡೆದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಸಿದ್ದೀಕ್ ಸ್ಟ್ರೀಟ್ ನಿವಾಸಿ ಅಬು ಮೊಹಮ್ಮದ್, ಗುಳ್ಮಿ ನಿವಾಸಿಗಳಾದ ಜಾಫರ್ ಮೊಹಮ್ಮದ್ ಹುಸೇನ್, ಅಬೀದ್ ಸಾಬ್, ಬಂದರು ರಸ್ತೆಯ ವಸೀಮ್ ಶಬ್ಬರ್, ಸುಲ್ತಾನ್ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಶಬಿ, ಅಜಾದ ನಗರ 7ನೇ ಕ್ರಾಸ್ ನಿವಾಸಿ ಶಹೀರ್ ಮಹ್ಮದ್, ಅಜಾದ ನಗರದ ಮಹ್ಮದ್ ಶಕೀಬ್ ಬಂಧಿತರು. ಭಟ್ಕಳದ ಜಾಲಿರಸ್ತೆ ಕೋಳಿ ಪಾಮ್ರ್ ಸಮೀಪದ ತೋಟದ ಮನೆ ಒಂದರಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಗ್​ನಲ್ಲಿ ತೊಡಗಿದ್ದರು. ಭಟ್ಕಳ ಎಎಸ್ಪಿ ನಿಖಿಲ್ ನೇತೃತ್ವದಲ್ಲಿ ಕಾರವಾರ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸೆ್ಪಕ್ಟರ್ ನಿಶ್ಚಲ್ ಕುಮಾರ್ ಹಾಗೂ ತಂಡ ದಾಳಿ ನಡೆಸಿದೆ.

ಬಂಧಿತರಿಂದ 50,100 ರೂ. ನಗದು ಹಾಗೂ ಬೆಟ್ಟಿಂಗ್​ಗೆ ಬಳಸಿದ್ದ ಮೊಬೈಲ್ ಫೋನ್ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ನಗರ ಠಾಣೆ ಪಿ.ಎಸ್.ಐ ಭರತ ಎಸ್,ಪಿ.ಎಸ್.ಐ ಎಚ್.ಕುಡಗುಂಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.