ಮಂಗಳೂರು: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರು ಮಂದಿಯನ್ನು ಸಿಸಿಬಿ ಹಾಗೂ ಇಕನಾಮಿಕ್ ಮತ್ತು ನಾರ್ಕೋಟಿಕ್ ಅಪರಾಧ ಪತ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ ಕೃಷ್ಣಾಪುರ, ಕಮಲೇಶ್ ಸುರತ್ಕಲ್, ಹರೀಶ್ ಶೆಟ್ಟಿ ಮುಂಬಯಿ, ಪ್ರೀತೇಶ್ ಅಶೋಕನಗರ, ಅವಿನಾಶ್ ಉರ್ವ ಬಂಧಿತರು.
ಪ್ರಕರಣದಲ್ಲಿ 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು 20 ಲಕ್ಷ ರೂ., 10 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.