ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವನ ಬಂಧನ
ಬೆಳಗಾವಿ:ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ 2 ಲಕ್ಷ ರೂ. ನಗದು ಸೇರಿದಂತೆ ಮೊಬೈಲ್ ಗಳನ್ನ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಈ ಕ್ರಿಕೆಟ್ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಬೆಳಗಾವಿಯ ಸಿಂಧಿ ಕಾಲೋನಿಯ ಉದ್ದವ್ ದಾಸ್ ಎಂಬುವನನ್ನ ಬಂಧಿಸಲಾಗಿದೆ.ಇನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಈ ಕುರಿತು ಸೈಬರ್ ಕ್ರೈಂ ( ಸಿಇಎನ್ ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರಿಂದ ದಂಧೆಗೆ ಬಳಸಲಾದ ಮೊಬೈಲ್ ಪೋನ್,ಸ್ಮಾರ್ಟ್ ಟಿವಿ,ಎರಡು ಲಕ್ಷ ರೂ ನಗದು ಹಣವನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ.