ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ರೆನೈಸಾನ್ಸ್ ಹೋಲ್ಡಿಂಗ್ಸ್ ಫ್ಯಾಕ್ಟರಿ ಮೈದಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾ ಬಳಗದ ವತಿಯಿಂದ ಚಿತ್ರ ನಟ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ ಅಪ್ಪು ಟ್ರೋಫಿ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಗ್ರಾ.ಪಂ ಅಧ್ಯಕ್ಷೆ ಶಾಂತಕುಮಾರಿ ಅಂಬೇಡ್ಕರ್ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಪ್ರಭುಸ್ವಾಮಿ, ಮಲ್ಲೇಶ್, ಜಯಚಂದ್ರ ಇದ್ಧಾರೆ.  
ಜಿಲ್ಲೆ

ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾ ಬಳಗದ ವತಿಯಿಂದ ಚಿತ್ರ ನಟ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿರುವ ಅಪ್ಪು ಟ್ರೋಫಿ-2022 ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ ಚಾಲನೆ ನೀಡಿದರು.

ರೆನೈಸಾನ್ಸ್ ಹೋಲ್ಡಿಂಗ್ಸ್ ಫ್ಯಾಕ್ಟರಿ ಮೈದಾನದಲ್ಲಿ ಅ.7ರಿಂದ 9ರವೆಗೆ ಟೂರ್ನಿ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ಶಾಂತಕುಮಾರಿ, ಸದಸ್ಯ ಮಲ್ಲೇಶ್ ಮಾತನಾಡಿದರು. ಸತ್ತೇಗಾಲ ಮಾಜಿ ಗ್ರಾಪಂ ಉಪಾಧ್ಯಕ್ಷ ಪ್ರಭುಸ್ವಾಮಿ, ಪ್ರಥಮದರ್ಜೆ ಗುತ್ತಿಗೆದಾರ ಗಂಗಾಧರ್, ಯುವ ಮುಖಂಡ ಜಯಚಂದ್ರ, ಆಯೋಜಕಾರದ ಅರ್ಜುನ್, ಮನೋಜ್, ಮಲ್ಲೇಶ್ ಮತ್ತಿತರಿದ್ದರು.