ಚಿಕ್ಕಮಗಳೂರು ರಾಣಾ ಸ್ಪೋಟ್ಸ್ ಕ್ಲಬ್ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತೆ ದಿ|| ಶ್ರೀಮತಿ ಗೌರಮ್ಮ ಬಸವೇಗೌಡ ಸ್ಮರಣಾರ್ಥ 7ನೇ ವರ್ಷದ ‘ಚಿಕ್ಕಮಗಳೂರು ಪ್ರೀಮಿಯರ್ ಲೀಗ್’ ಕ್ರಿಕೇಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ 
ಜಿಲ್ಲೆ

ಕ್ರಿಕೆಟ್ ನಿಂದ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಲು ಸಾಧ್ಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಯುವಸಮೂಹಕ್ಕೆ ದೈಹಿಕ ಸಾಮರ್ಥ್ಯ ಹಾಗೂ ರಾಷ್ಟ್ರಮಟ್ಟದ ಲ್ಲಿ ಮನ್ನಣೆ ಗಳಿಸಲು ಕ್ರಿಕೇಟ್ ಅತ್ಯಂತ ಸಹಕಾರಿ. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ನಿರಂತರ ಅಭ್ಯಾಸದಿಂದ ಕೂಡಿದರೆ ಮಾತ್ರ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇ ಖರ್ ಹೇಳಿದರು.

ನಗರ ಹೊರವಲಯದಲ್ಲಿ ಚಿಕ್ಕಮಗಳೂರು ರಾಣಾ ಸ್ಪೋಟ್ಸ್ ಕ್ಲಬ್ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತೆ ದಿ|| ಶ್ರೀಮತಿ ಗೌರಮ್ಮ ಬಸವೇಗೌಡ ಸ್ಮರಣಾರ್ಥ 7ನೇ ವರ್ಷದ ‘ಚಿಕ್ಕಮಗಳೂರು ಪ್ರೀಮಿಯರ್ ಲೀಗ್’ ಕ್ರಿಕೇಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವ ರು ಮಾತನಾಡಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನೇಕ ಯುವಪ್ರತಿಭೆಗಳನ್ನು ಮುಂಚೂಣಿಗೆ ತರುವ ನಿಟ್ಟಿ ನಲ್ಲಿ ರಾಣಾ ಸ್ಪೋಟ್ರ್ಸ್ ಕ್ಲಬ್ ಪಂದ್ಯಾವಳಿ ಆಯೋಜಿಸಿ ಪ್ರೋತ್ಸಾಹಿಸುತ್ತಿದ್ದು ಅದರಂತೆ ಸರ್ಕಾರವು ಯುವ ಕರಿಗೆ ಗುಣಮಟ್ಟ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.

ಹಳ್ಳಿಯಿಂದ ಪಟ್ಟಣದವರೆಗೂ ಕ್ರಿಕೇಟ್ ಆಡಿದವರೇ. ಪ್ರತಿಭೆ ಎಲ್ಲಿ ಅರಳುವುದೇ ತಿಳಿಯದು. ಹಾಗಾ ಗಿ ಸರ್ಕಾರವು ಯುವಕರಿಗೆ ಪ್ರೋತ್ಸಾಹಿಸಲು ವಿಶೇಷ ಸವಲತ್ತು ಒದಗಿಸಿಕೊಡಬೇಕು. ಇದರಿಂದ ಮುಂ ದೊಂದು ದಿನ ರಾಷ್ಟ್ರಮಟ್ಟ ಕ್ರೀಕೇಟ್‍ನಲ್ಲಿ ಸ್ಥಳೀಯರು ಛಾಪು ಮೂಡಿಸಬಹುದು ಎಂದು ಹೇಳಿದರು.

ಯಾವುದೇ ಕ್ರೀಡೆಯಿರಲೀ ಶ್ರದ್ದೆ, ಶಿಸ್ತು ಹಾಗೂ ಪರಿಶ್ರಮ ಅತಿಮುಖ್ಯ. ದೈನಂದಿನ ಕಠಿಣ ಅಭ್ಯಾಸ ದಿಂದ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದ ಅವರು ಸ್ಪೋಟ್ಸ್ ಆಯೋಜಿಸಿರುವ ಪಂದ್ಯಾವಳಿಯ ಲ್ಲಿ ಒಕ್ಕಲಿಗರ ಸಂಘ ಹಾಗೂ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ಸಿಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ ಮಾತನಾಡಿ ರಾಜ್ಯಮಟ್ಟದಲ್ಲಿ ಕ್ರೀಡಾಪಟುಗಳನ್ನು ಗುರು ತಿಸಲು ರಾಣಾ ಸ್ಪೋಟ್ಸ್ ಕ್ಲಬ್ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳು ಸೋತರೆಂಬ ಕಾರಣಕ್ಕೆ ಸುಮ್ಮನಾಗದೇ ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಗೆದ್ದ ತಂಡಗಳು ಬೀಗದೇ ಮುನ್ನೆಡೆಯಬೇಕು ಎಂದು ಹೇಳಿದರು.

ದಿ|| ಶ್ರೀಮತಿ ಗೌರಮ್ಮ ಬಸವೇಗೌಡರು ಸಮಾಜದಲ್ಲಿ ಹಲವಾರು ಜನಪ್ರಿಯ ಸೇವೆಯನ್ನು ಸಲ್ಲಿಸಿ ದ್ದಾರೆ. ಅನೇಕ ಆಸ್ಪತ್ರೆ, ಅಂಗನವಾಡಿ ಹಾಗೂ ಸಮುದಾಯ ಭವನಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಕೈಗೊಂಡಿರುವ ಪಂದ್ಯಾವಳಿಯಲ್ಲಿ ತೊಡಕಾಗದಂತೆ ನಡೆದುಕೊಳ್ಳಬೇಕು ಎಂ ದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಣಾ ಸ್ಪೋಟ್ಸ್ ಕ್ಲಬ್ ಖಜಾಂಚಿ ಗೋಪಾಲಕೃಷ್ಣ ಏಳನೇ ಆವೃತ್ತಿಯಲ್ಲಿ ಹಮ್ಮಿಕೊಂಡಿರುವ ಕ್ರೀಕೇಟ್ ಪಂದ್ಯಾವಳಿಯು ನವೆಂಬರ್ 25 ರಿಂದ ಡಿಸೆಂಬರ್ 01 ರವರೆಗೆ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸತತ ಆರು ವರ್ಷಗಳು ಪೂರೈಸಿ ಏಳನೇ ಆವೃತ್ತಿಗೆ ಕಾಲಿಡುತ್ತಿರುವುದು ಸ್ಪೋಟ್ಸ್ ಕ್ಲಬ್ 1947ರಲ್ಲಿ ಸ್ಥಾಪನೆಗೊಂಡಿತ್ತು. ಕಾಲಕ್ರಮೇಣ ಕ್ಲಬ್‍ನಲ್ಲಿ ಹಲವಾರು ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದುಕೊಂಡಿದ್ದಾರೆ ಎಂದರು.

ಇದೇ ವೇಳೆ 120 ಆಟಗಾರರು ಪಂದ್ಯಾವಳಿಯಲ್ಲಿ ನೋಂದಾಯಿಸಿದ್ದು ಐದು ಕ್ರಿಕೇಟ್ ತಂಡದ ಮಾಲೀಕರು ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಹರಾಜಿನ ಮೂಲಕ ಪೂರ್ಣಗೊಳಿಸಿದರು.

ಈ ಸಂದರ್ಭದಲ್ಲಿ ರಾಣಾ ಸ್ಪೋಟ್ಸ್ ಕ್ಲಬ್ ಮಾಜಿ ಆಟಗಾರ ಐ.ಫ್ರಾನ್ಸಿಸ್, ಇ-ಸ್ಪೋಟ್ಸ್ ವ್ಯವಸ್ಥಾಪಕ ವೈಶಿಷ್ಟ, ಸಿಪಿಎಲ್‍ನ ಸದಸ್ಯರುಗಳಾದ ನಟರಾಜ್, ಹರೀಶ್, ಅಭಿಷೇಕ್, ಸಂತೋಷ್ ಮತ್ತಿತರರಿದ್ದರು.