ಸುಂಟಿಕೊಪ್ಪ: ಕಂಬಿಬಾಣೆ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಸಲುವಾಗಿ ಫಲಾನುಭವಿಗಳು ನೇರವಾಗಿ ಕ್ಯೂಆರ್ ಕೋಡ್ ಬಳಸಿ ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ನೀಡುವ ಕುರಿತ ಅರಿವು ಮೂಡಿಸುವ ಕಾರ್ಯಾಗಾರ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು. ಕಂಬಿಬಾಣೆ ಭಾಗದಲ್ಲಿ ನಡೆಯುವ ಕಾಮಗಾರಿಗಳ ಕುರಿತಾಗಿ ಬಿಡುಗಡೆಯಾಗುವ ಅನುದಾನ ಮತ್ತು ಕ್ಯೂ ಆರ್ ಕೋಡ್ ಬಳಕೆಯ ಮಾಹಿತಿಯನ್ನು ಪಿಡಿಒ ಮಧುಮತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಖರ, ಸದಸ್ಯರಾದ ಮಧುನಾಗಪ್ಪ, ಆರ್.ಆರ್.ಮೋಹನ, ಕೆ.ಪಿ.ಕೃಷ್ಣ, ಅಶ್ವಿನಿ ಹಾಜರಿದ್ದರು.