ಕಡಹಿನಬೈಲು ಗ್ರಾಪಂ ಹೊಸರೋಡ್ ಸರ್ಕಲ್‌ನಲ್ಲಿ ಸೋಲಾರ್ ಲೈಟ್ ಚಾಲನೆ ಕಾರ್ಯಕ್ರಮವನ್ನು ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ಉದ್ಘಾಟಿಸಿದರು. ಡಾ. ಕೆ.ಪಿ.ಅಂಶುಮಂತ್, ಅಶ್ವಿನಿ, ಸುನೀಲ್‌ಕುಮಾರ್, ಎಸ್.ಎಸ್.ಶಾಂತಕುಮಾರ್, ಡಿ.ಸಿ.ದಿವಾಕರ್, ಶ್ಯಾಮಲಾ, ಬಿಂದು, ಡಾ. ಸ್ವಪ್ನಾಲಿ, ಶೈಲಾ ಇತರರಿದ್ದರು.  
ಜಿಲ್ಲೆ

ಕ್ಯಾನ್ಸರ್ ನಿರೋಧಕ ಲಸಿಕೆ ಆಂದೋಲನ ಚಿಂತನೆ

ಎನ್.ಆರ್.ಪುರ: ಕ್ಯಾನ್ಸರ್ ಬಾರದಂತೆ ಯುವತಿಯರಿಗೆ ಲಸಿಕೆ ನೀಡುವ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ತಿಳಿಸಿದರು.

ಕಡಹಿನಬೈಲು ಗ್ರಾಪಂ ಹೊಸರೋಡ್ ಸರ್ಕಲ್‌ನಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಲೈಟ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಸೋಲಾರ್ ಪ್ಲಾಂಟ್ ಈ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಕಲ್ಪಿಸಿರುವ ಶಾಶ್ವತ ಕಾಮಗಾರಿ. ಇದನ್ನು ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಗ್ರಾಪಂ ಇದರ ನಿರ್ವಹಣೆ ಮಾಡಬೇಕು. ಸೋಲಾರ್ ಲೈಟ್ ಶಾಶ್ವತ ಕಾಮಗಾರಿಗೆ ಫೆೆಡರಲ್ ಬ್ಯಾಂಕ್ ಹಾಗೂ ಕಡಹಿನಬೈಲು ಗ್ರಾಪಂ ಸಹಕಾರ ನೀಡಿವೆ ಎಂದು ತಿಳಿಸಿದರು.

ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಸೋಲಾರ್ ಲೈಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸರ್ಕಾರ ಇಂಥ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಸ್ಥಳೀಯವಾಗಿ ಮಂಜೇಗೌಡರು, ಮಾಜಿ ಸಚಿವ ಗೋವಿಂದೇಗೌಡರು, ಡಿ.ಸಿ.ದಿವಾಕರ ಹಲವಾರು ಶಾಶ್ವತ ಕಾಮಗಾರಿ ಮಾಡಿದ್ದರು ಎಂದು ತಿಳಿಸಿದರು.

ಶಿವಮೊಗ್ಗ ಫೆಡರಲ್ ಬ್ಯಾಂಕ್ ಉಪಾಧ್ಯಕ್ಷ ಎಂ.ಎಲ್.ಅಜಿತ್, ಬಿ.ಎಚ್.ಕೈಮರ ಶಾಖೆ ವ್ಯವಸ್ಥಾಪಕ ಕೃಪಾಕ್ಷ್, ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಬಿಂದು ವಿಜಯ್, ಅಶ್ವಿನಿ, ಚಂದ್ರಶೇಖರ್, ಲಿಲ್ಲಿ ಮಾತುಕುಟ್ಟಿ, ರವೀಂದ್ರ, ಶೈಲಾ, ವಾಣಿ, ರಾಧಿಕಾ, ಡಾ. ಸ್ವಪ್ನಾಲಿ, ನಾಗಲಕ್ಷ್ಮೀ, ಶ್ಯಾಮಲಾ, ದಿವಾಕರ್, ಎಸ್.ಡಿ.ರಾಜೇಂದ್ರ ಇತರರಿದ್ದರು.