ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ಜೂ. 14ರಂದು ಬೆಳಗ್ಗೆ 9.30ಕ್ಕೆ ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸಾದ 16ರಿಂದ 20 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ ಇಲ್ಲಿನ ಟಾಟಾ ಮೋಟಾರ್ಸ್ ಕಂಪನಿಯಿAದ ಅಪ್ರೆಂಟೈಸ್‌ಶಿಪ್ ಹುದ್ದೆಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಶೇ. 70 ಅಂಕ ಪಡೆದಿರಬೇಕು. ಆಯ್ಕೆಯಾದವರಿಗೆ 2 ವರ್ಷ ತರಬೇತಿ ಹಾಗೂ ಮಾಸಿಕ 13,000 ರೂಪಾಯಿ ಶಿಷ್ಯವೇತನ ನೀಡಲಾಗುವುದು. ತರಬೇತಿ ನಂತರ ಎನ್‌ಸಿವಿಟಿ ನವದೆಹಲಿಯಿಂದ ಐಟಿಐ ತತ್ಸಮಾನ ಪ್ರಮಾಣಪತ್ರ ಮತ್ತು ಟಾಟಾ ಮೋಟಾರ್ಸ್ನಿಂದ ಪ್ರಮಾಣಪತ್ರ ನೀಡಲಾಗುವುದು. ಟಾಟಾ ಮೋಟಾರ್ಸ್ನಲ್ಲಿ ಡಿಪ್ಲೋಮಾ ಕಲಿಯಲು ಅವಕಾಶ ಹಾಗೂ ಉದ್ಯೋಗ ದೊರಕಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.