ಚಿತ್ರದುರ್ಗ: ಕೈಗಾರಿಕೆ,ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕಂಪನಿಗಳ ಬೇಡಿಕೆ ಆಧರಿಸಿ,ಕೌಶಲ ತರಬೇತಿ ನೀಡಿ,ಜಿಲ್ಲೆಯ ನಿರುದ್ಯೋಗ ಯುವ ಜನ ರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಡಿಸಿ ಕಚೇರಿ ಯಲ್ಲಿ ಶುಕ್ರವಾರ ಜಿಲ್ಲಾ ಕೌಶಲ್ಯಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ನಾನಾ ಕಂಪನಿಗಳಿಗೆ ಮಾನವ ಸಂಪನ್ಮೂಲದ ಅವಶ್ಯವಿರುತ್ತ ದೆ.ಕಂಪನಿ ಹಾಗೂ ಕೈಗಾರಿಕೆ ಆಧಾರಿತ ಬೇಡಿಕೆಗಳನ್ನು ಗುರುತಿಸಿ,ಜಿಲ್ಲಾ ಕೌಶಲ್ಯಮಿಷನ್‌ನಿಂದ ಯುವಜನರಿಗೆ ತರಬೇತಿ ನೀಡಿದರೆ ಅವ ರಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ.
ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಪೂರ್ವ,ಪದವಿ,ಐಟಿಐ,ಡಿಪ್ಲೊಮಾ,ಎಂಜಿನಿಯರಿಂಗ್,ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧ ಕೋರ್ಸ್ ವಿದ್ಯಾರ್ಥಿಗಳು,ನಿರುದ್ಯೋಗಿಗಳನ್ನು ಗುರುತಿಸಿ ಅಂಕಿ,ಅಂಶಗಳನ್ನು ಸಂಗ್ರಹಿಸಬೇಕು. ನಿಗದಿತ ಸಮಯದೊಳಗೆ ಈ ಕೆಲಸ ಆಗ ಬೇಕೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ ಅವರಿಗೆ ಸೂಚಿಸಿದರು.
ಗೋಪಾಲರೆಡ್ಡಿ ಮಾತನಾಡಿ,2022-23ನೇ ಸಾಲಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಸ್ಕಿಲ್ ಕನೆಕ್ಟ್ ಪೋರ್ಟಲ್ ತೆರೆದಿದ್ದು, ಉದ್ಯೋಗಧಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಏಕಗವಾಕ್ಷಿಯಲ್ಲಿ ಸಂಪರ್ಕಿಸ ಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಅಭ್ಯರ್ಥಿಗಳ ನೋ ಂದಣಿಗಾಗಿ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಲಾಗಿದೆ.
ಈವರೆಗೂ 1592 ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿ ದ್ದಾರೆ. ಮುಂದಿನ ವರ್ಷ ಪ್ರಾನ್ಸ್‌ನಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆ ನಡೆಯಲಿದ್ದು 75ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸುತ್ತಿವೆ. ಆದ್ದರಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಇಂಡಿಯಾ ಸ್ಕಿಲ್-2023 ಸ್ಪರ್ಧೆಯನ್ನು ಪ್ರಾರಂಭಿಸಿದೆ. ಈವರೆಗೂ ಜಿಲ್ಲೆಯ ಎಲ್ಲ ಇಂಜಿನಿಯ ರಿ ಂಗ್,ಐಟಿಐ,ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ನೀಡಿ ತಿಳಿವಳಿಕೆ ನೀಡಲಾಗಿದೆ.
80ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಕೌಶಲ್ಯಕ್ಕೆ ಸಂಬಂಧಿ ಸಿದಂತೆ ವಿಡಿಯೊಗಳನ್ನು ಆಪ್ ಲೋಡ್ ಮಾಡಿದ್ದಾರೆ.ಯೋಗ,ಕೇಶ ವಿನ್ಯಾಸ, ವೆಲ್ಡಿಂಗ್,ಅಡುಗೆಗೆ ಸಂಬಂಧಿಸಿದ ಸ್ಕೀಲ್‌ಗಳು ಆಗಿದ್ದು, ವಲಯ ಮಟ್ಟದ ಆಯ್ಕೆ ನಡೆಯ ಬೇಕಿದೆ ಎಂದು ರೆಡ್ಡಿ ಹೇಳಿದರು.
ಸ್ಕಿಲ್‌ಕನೆಕ್ಟ್ ಪೋರ್ಟಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳ ನೋಂದಣಿಗೆ ಕ್ರಮವಹಿಸ ಬೇಕು. ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಗೆ ಲುವು ಪಡೆಯುವ ನಿಟ್ಟಿನಲ್ಲಿ ಯಾವುದಾದರೂ ಒಂದು ಕೌಶಲ್ಯಕ್ಕೆ ಹೆಚ್ಚಿನ ಗಮನನೀಡಿ,ಗೆಲುವಿಗೆ ಜಿಲ್ಲೆಯ ಸ್ಪರ್ಧಿಗಳನ್ನು ಅಣಿಗೊಳಿಸ ಬೇಕೆಂದು ಡಿಸಿ ಸಲಹೆ ನೀಡಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗ ದೀಶ್ ಹೆಬ್ಬಳ್ಳಿ,ಕಾರ್ಮಿಕ ಅಧಿಕಾರಿ ಯಶೋಧರ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜು ಮತ್ತಿತರ ಅಧಿಕಾರಿಗಳಿದ್ದರು.
ಪಿಎಂ ಸ್ವನಿಧಿ ಸೌಲಭ್ಯ
ಬೀದಿಬದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ 10 ಸಾ ವಿ ರ ರೂ.ಸಾಲ ಸಿಗಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಯೋಜನೆ ನೆರವು ತಲುಪಿಸುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಯೋಜನೆಯಡಿ ಜಿಲ್ಲೆಯಲ್ಲಿ 4643 ಗುರಿ ನಿಗದಿಯಾಗಿದೆ. 4695 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 4007 ಅರ್ಜಿಗಳು ಅನುಮೋದನೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.