ಚನ್ನಮ್ಮ ಕಿತ್ತೂರು: ವಿದ್ಯಾಥಿಗಳು ಕೇವಲ ಪದವಿ ಪಡೆದರೆ ಸಾಲದು, ಅದರೊಂದಿಗೆ ಉದ್ಯೋಗಾರ್ಹತೆಗೆ ಅವಶ್ಯವಾದ ಕೌಶಲಗಳನ್ನು ಅಭಿವದ್ಧಿಪಡಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಅಭಿವದ್ಧಿಗೆ ಅವಶ್ಯಕವಾಗಿರುವ ತರಬೇತಿ ನೀಡುವ ಸಂಸ್ಥೆಗಳು ಕಡಿಮೆ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಕೌಶಲಾಭಿವದ್ಧಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರ್ಮನ್ ಜಗದೀಶ ವಸ್ತ್ರದ, ವಿದ್ಯಾರ್ಥಿಗಳು ಮುಂಬರುವ ಜೀವನದಲ್ಲಿ ಯಶಸ್ಸು ಸಾಧಿಸಿದರೆ ನಮ್ಮ ಸಂಸ್ಥೆಗೆ ಸಲ್ಲಿಸುವ ಕತಜ್ಞತೆ ಎಂದರು. ಸಮೀಪದ ಕತ್ರಿದಡ್ಡಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕಿ ಸುಜಾತಾ ಪಾಟೀಲ, ಸಹಶಿಕ್ಷಕ ಎಂ.ಎಸ್.ಕದಂ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಅರುಣಕುಮಾರ ಬಿಕ್ಕಣ್ಣವರ, ವೈಸ್ ಚೇರ್ಮನ್ ವಿ.ಆರ್.ಶೆಟ್ಟರ, ನಿರ್ದೇಶಕರಾದ ಎನ್.ವಿ.ತಡಕೋಡ, ಎಂ.ಬಿ.ದಳವಾಯಿ, ಎನ್.ಎಸ್.ಹಿರೇಮಠ, ಯು.ಡಿ.ಭಾರತಿ, ಡಿ.ಆರ್.ಪಾಟೀಲ, ವಿ.ಆರ್.ಪಾಟೀಲ, ಐ.ಕ್ಯೂ.ಎ.ಸಿ ಚೇರ್ಮನ್ ಆರ್.ಬಿ.ಹಳಿನಾಳೆ, ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ, ವಿದ್ಯಾರ್ಥಿ ಒಕ್ಕೂಟದ ಚೇರ್ಮನ್ ಡಾ. ಕೆ.ಆರ್. ಮೆಳವಂಕಿ, ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ಎಸ್. ಪ್ರಭಯ್ಯನವರಮಠ, ಪ್ರೊ.ಸಿ.ಎಂ.ಗರಗದ, ಹುಣಶಿಕಟ್ಟಿ ಕಾಲೇಜ್ ಪ್ರಭಾರಿ ಪ್ರಾಚಾರ್ಯೆ ಪಾರ್ವತಿ ಲದ್ದಿಮಠ, ವಿದ್ಯಾರ್ಥಿನಿ ಪ್ರತಿನಿಧಿ ಅಕ್ಷತಾ ಸುಭೇದಾರ, ಸ್ವಾತಿ ಬಾಳೇಕುಂದ್ರಿ ಇತರರು ಇದ್ದರು.