ಜಿಲ್ಲೆ

ಕೌಶಲ ಅಭಿವೃದ್ಧಿಗೆ ಕಲಿಕಾ ಹಬ್ಬ ಸಹಕಾರಿ

ಕಂಪ್ಲಿ: ಮಕ್ಕಳಲ್ಲಿನ ಕಲಿಕಾ ಗುಣಮಟ್ಟವನ್ನು ಸುಧಾರಿಸುವುದರೊಂದಿಗೆ ಸಾಮೂಹಿಕ ಬೆಳವಣಿಗೆಗೆ ಕಲಿಕಾ ಹಬ್ಬ ಪೂರಕವಾಗಿದೆ ಎಂದು ಸಿಆರ್‌ಪಿ ಎಚ್.ದೊಡ್ಡಬಸಪ್ಪ ಹೇಳಿದರು.

ಹೊಸೂರು ಜವುಕಿನ ಸಹಿಪ್ರಾ ಶಾಲೆಯಲ್ಲಿ ಮೆಟ್ರಿ ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ಕಲಿಕಾ ಹಬ್ಬದಲ್ಲಿ ಮಂಗಳವಾರ ಮಾತನಾಡಿದರು. ಕಲಿಕಾ ಹಬ್ಬ ಶೈಕ್ಷಣಿಕ ಪರಿಸರವನ್ನು ಗಟ್ಟಿಗೊಳಿಸುತ್ತದೆ. ಮಕ್ಕಳಲ್ಲಿ ಭಾವನಾತ್ಮಕ, ದೈಹಿಕ ಕೌಶಲಗಳನ್ನು ಅಭಿವೃದ್ಧಿಗೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಲಿಕಾ ಹಬ್ಬದ ಮೆರವಣಿಗೆಗೆ ಗ್ರಾಪಂ ಅಧ್ಯಕ್ಷೆ ಜಿ.ಕವಿತಾ ಚಾಲನೆ ನೀಡಿದರು. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಖಜಾಂಚಿ ರಾಜೇಶ್ವರಿ, ಜಿಪಿಟಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ, ಸರ್ಕಾರಿ ನೌಕರರ ಸಂಘದ ಸದಸ್ಯ ಎಚ್.ಪಿ.ಸೋಮಶೇಖರ, ಸರ್ವೇಶ್, ಸಿಆರ್‌ಪಿಗಳಾದ ಚಂದ್ರಯ್ಯಸೊಪ್ಪಿಮಠ, ರೇಣುಕಾರಾಧ್ಯ, ಸ್ವಯಂಪ್ರಭಾ, ಇಸಿಒ ಎಂ.ರೇವಣ್ಣ, ಜಿ.ವೀರೇಶಪ್ಪ ಇತರರಿದ್ದರು.