ಜಿಲ್ಲೆ

ಕೌನ್ಸ್‌ಲಿಂಗ್ ಜಿಲ್ಲೆಯಲ್ಲಿ ನಡೆಸಲಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಅಭಿಮತ ವರ್ಗಾವಣೆ ಕೌನ್ಸ್‌ಲಿಂಗ್‌ನ್ನು ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಯಲ್ಲಿಯೇ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯು ಡಿಡಿಪಿಐ ಉಮಾದೇವಿ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿ, ಇದೇ ತಿಂಗಳು ನಡೆಯುವ ವರ್ಗಾವಣೆ ಕೌನ್ಸ್‌ಲಿಂಗ್‌ನ್ನು ಕಲ್ಬುರ್ಗಿ ಜಿಲ್ಲೆ ಯು ದೂರವಾಗುವುದರಿಂದ ಜಿಲ್ಲೆ ಅಥವಾ ವಿಜಯನಗರದಲ್ಲಿ ನಡೆಸಬೇಕು. ಎರಡು ಜಿಲ್ಲೆಯಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳ ಮಾಹಿತಿ ಕೌನ್ಸ್‌ಲಿಂಗ್‌ನಲ್ಲಿ ಒದಗಿಸಬೇಕು. ಒಂದೇ ಬಾರಿಗೆ ವರ್ಗಾವಣೆ ಅವಕಾಶವಿರುವುದರಿಂದ ವಿಷಯವಾರು ಎಂದು ಪರಿಗಣಿಸದೆ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.