ಕೌಜಲಗಿ: ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಜಿಲ್ಲೆ ರಚಿಸಿ ತಾಲೂಕಿನ ಹೋಬಳಿ ಕೇಂದ್ರವಾದ ಕೌಜಲಗಿ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಬೆಳಗಾವಿ ಅಧಿವೇಶನದಲ್ಲಿಯೇ ಘೋಷಿಸಬೇಕೆಂದು ಕೌಜಲಗಿ ತಾಲೂಕು ಹೋರಾಟಗಾರರ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ. ಪಟ್ಟಣದ ಕಳ್ಳಿಗುದ್ದಿ ವೃತ್ತದಲ್ಲಿ ಗುರುವಾರ ಕೌಜಲಗಿ ತಾಲೂಕು ಹೋರಾಟಗಾರರು ಧರಣಿ ನಡೆಸಿ ಕೌಜಲಗಿ ಉಪತಹಸೀಲ್ದಾರ್ ಡಿ.ಸಿ. ಪತ್ತಾರ ಅವರಿಗೆ ಮನವಿ ಸಲ್ಲಿಸಿದರು.
ಕೌಜಲಗಿ ಗ್ರಾಮವು ತಾಲೂಕು ರಚನೆಗಾಗಿ 5 ದಶಕಗಳಿಂದ ಹೋರಾಡುತ್ತ ಬಂದಿದೆ. ತಾಲೂಕು ಪುನರ್ ವಿಂಗಡಣೆಯ ಎಂ. ವಾಸುದೇವರಾವ, ಟಿ.ಎಂ. ಹುಂಡೇಕರ, ಪಿ.ಸಿ. ಗದ್ದಿಗೌಡರ ಆಯೋಗಗಳು ಕೌಜಲಗಿಯನ್ನು ತಾಲೂಕು ಮಾಡಬಹುದೆಂದು ಶಿಾರಸು ಮಾಡಿವೆ. ಮೂಡಲಗಿ, ರಾಮದುರ್ಗ, ಯರಗಟ್ಟಿ ಹಾಗೂ ಗೋಕಾಕ ತಾಲೂಕಿನ ಗಡಿಯ 60 ಗ್ರಾಮಗಳುಳ್ಳ ಕೌಜಲಗಿ ತಾಲೂಕು ರಚಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಮುಖಂಡರಾದ ಶಿವಾನಂದ ಲೋಕನ್ನವರ, ಸುಭಾಷ ಕೌಜಲಗಿ, ಸಾಹಿತಿ ಡಾ.ರಾಜು ಕಂಬಾರ, ದಸ್ತಗಿರ್ ನದ್ಾ, ಮಾರುತಿ ಥರಕಾರ ಮಾತನಾಡಿದರು. ಶ್ರೀಕಾಂತಯ್ಯ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರವಿ ಪರುಶೆಟ್ಟಿ, ಅಶೋಕ ಶಿವಾಪುರ, ಶ್ರೀಶೈಲ ಗಾಣಿಗೇರ, ಅಶೋಕ ಪಾಟೀಲ, ಜಗದೀಶ ಶಿವಾಪುರ, ಭೀಮಶಿ ಉದ್ದಪ್ಪನವರ, ಮಹಾದೇವ ಬುದ್ನಿ, ಮಹದೇವ ಸೊಗಲದ, ಪ್ರಕಾಶ ಶೆಟ್ಟರ, ಚಿದಾನಂದ ವಿರಕ್ತಮಠ, ಸಂಜೀವ ಮಿರ್ಜಿ, ಚೇತನ ಕತ್ತಿ, ಗೋಪಾಲ ಸಂಕಿನವರ, ಅಡಿವೆಪ್ಪ ಕಂಬಾರ, ನಾಗಪ್ಪ ಥರಕಾರ ಶಿವಲಿಂಗಯ್ಯ ಹಿರೇಮಠ, ಸುರೇಶ ನಾಯ್ಕ ಇತರರಿದ್ದರು.