ಕೋಹಳ್ಳಿ: ಸಿದ್ದಿ ಪುರುಷ ಶ್ರೀ ಅಪ್ಪಯ್ಯಸ್ವಾಮಿಗಳ ಜಾತ್ರಾ ಮಹೋತ್ಸವ ಜೂ.೩೦ರಿಂದ ಜು.೨ರ ವರೆಗೆ ನಡೆಯಲಿದೆ.
ಜೂ.೩೦ರಂದು ಬೆಳಗ್ಗೆ ೮ಕ್ಕೆ ಶಂಕರಯ್ಯ ಹಿರೇಮಠ ಸ್ವಾಮೀಜಿ ಅವರಿಂದ ರುದ್ರಾಭಿಷೇಕ ಮತ್ತು ಹಂದರ ಹಾಕಲಾಗುತ್ತದೆ. ವಿವಿಧ ಗ್ರಾಮದವರಿಂದ ಶಿವಭಜನೆ ಜರುಗಲಿದೆ.
ಜು.೧ರಂದು ವಿಶೇಷ ಪೂಜೆ ಹಾಗೂ ನೈವೇದ್ಯ, ಸಂಜೆ ೪ ಗಂಟೆಗೆ ಶಹನಾಯಿ ವಾದನ, ಡೊಳ್ಳು, ಬ್ಯಾಂಡದೊAದಿಗೆ ಶ್ರೀ ಅಪ್ಪಯ್ಯ ಸ್ವಾಮಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ. ರಾತ್ರಿ ೧೦ ಗಂಟೆಗೆ ಗೀಗೀ ಪದ ಜರುಗಲಿದೆ.
ಜು.೨ರಂದು ವಿಶೇಷ ಪೂಜೆ, ವಿವಿಧ ವಾದ್ಯಗಳಿಂದ ಕಲಾ ಪ್ರದರ್ಶನ, ಮಹಾಪ್ರಸಾದ ಜರುಗುವುದು. ಮಧ್ಯಾಹ್ನ ೨.೩೦ರಿಂದ ಶ್ರೀಗಳಿಂದ ಆಶೀರ್ವಚನ ಇದೆ.
ಡಾ.ಸಾವಳಗೇಶ್ವರ ದೇವರು, ಕಕಮರಿ ಗುರುದೇವ ಆಶ್ರಮದ ಆತ್ಮಾರಾಮ ಗುರುಗಳು, ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಸ್ವಾಮೀಜಿ ಭಾಗವಹಿಸುವರು. ಸಂಜೆ ೫ ಗಂಟೆಗೆ ಪಲ್ಲಕ್ಕಿ ಹಾಗೂ ರಥೋತ್ಸವ ನೆರವೇರಲಿದೆ. ರಾತ್ರಿ ೧೦ ಗಂಟೆಗೆ ಹೇಮರಡ್ಡಿ ಮಲ್ಲಮ್ಮ ಬೈಲಾಟ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.