ಜಿಲ್ಲೆ

ಕೋವಿಡ್ ಕೇರ್‌ಗೆ 10 ಆಕ್ಸಿಜನ್ ಬೆಡ್ ವಿತರಣೆ

ಬೆಳಗಾವಿ: ಕೆಎಲ್‌ಇ ಸಂಸ್ಥೆ ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರದಿಂದ ನಗರದ ಲಿಂಗರಾಜ ಕಾಲೇಜ್ ಕ್ಯಾಂಪಸ್‌ನಲ್ಲಿ ಆರಂಭಿಸಲಾಗಿರುವ ಕೋವಿಡ್ ರೋಗಿಗಳ ಆರೈಕೆಗೆ 10 ಆಕ್ಸಿಜನ್ ಬೆಡ್ ವಿತರಿಸಲಾಗಿದೆ. ಹತ್ತು ದಿನಗಳ ಹಿಂದೆ ಇದೇ ಕಾಲೇಜ್‌ನಲ್ಲಿ 50 ಬೆಡ್‌ಗಳ ಕೋವಿಡ್ ಐಸೋಲೇಷನ್ ಸೆಂಟರ್ ಆರಂಭಿಸಲಾಗಿತ್ತು.

ಈಗ 10 ಆಕ್ಸಿಜನ್ ಬೆಡ್‌ಗಳ ಸೌಲಭ್ಯ ನೀಡಿ, ಕರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದೆ. ವೈದ್ಯರಿಂದ ದಿನದ 24 ಗಂಟೆ ಈ ಕೇಂದ್ರದಲ್ಲಿ ರೋಗಿಗಳ ಆರೈಕೆ ಮಾಡಲಾಗುತ್ತಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರಿಶೀಲಿಸಲಾಗುತ್ತಿದೆ.

ಆಂಬುಲೆನ್ಸ್ ವ್ಯವಸ್ಥೆ ಸೇರಿ ಊಟ, ಉಪಹಾರ ಸೌಲಭ್ಯದೊಂದಿಗೆ ಸೋಂಕಿತರಿಗೆ ಯೋಗ ಹೇಳಿಕೊಡಲಾಗುತ್ತಿದೆ ಎಂದು ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರದ ಜಂಟಿ ಕಾರ್ಯದರ್ಶಿ ಡಾ. ಹರಪ್ರೀತ್ ಕೌರ್ ತಿಳಿಸಿದ್ದಾರೆ.