ಟ್ರೆÊನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದವರನ್ನು ಗಲ್ಲಿಗೇರಿಸಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಯಾದಗಿರಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು. ಡಾ.ಭಗವಂತ ಅಣವಾರ, ಡಾ.ವೈಜನಾಥ ದುಗ್ಗಾಣಿ, ಡಾ.ಲಕ್ಷಿö್ಮÃ ಪಾಟೀಲ್, ಡಾ.ಬಸವರಾಜ ನರಸಣಗಿ, ಡಾ.ಸಂಜೀವ್ ರಾಯಚೂರಕರ್ ಇತರರಿದ್ದರು. 
ಜಿಲ್ಲೆ

ಕೋಲ್ಕತ ಘಟನೆ ಖಂಡಿಸಿ ರಸ್ತೆಗಿಳಿದ ವೈದ್ಯರು

ಯಾದಗಿರಿ: ಕೋಲ್ಕತದ ಟ್ರೆÊನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕಿರಾತಕರನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಾ.ಭಗವಂತ ಅಣವಾರ, ಕಾರ್ಯದರ್ಶಿ ಡಾ.ವೈಜನಾಥ ದುಗ್ಗಾಣಿ ಮಾತನಾಡಿ, ಟ್ರೆÊನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಖಂಡನೀಯ. ಪೈಶಾಚಿಕ ಕೃತ್ಯ ಎಸಗಿದ ಎಲ್ಲರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಘಟನೆಯಿಂದ ವಿಶೇಷವಾಗಿ ಮಹಿಳಾ ವೈದ್ಯರು ವೃತ್ತಿಪರತೆಯಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ವೈದ್ಯರು ಎಮರ್ಜೆನ್ಸಿ ಹೊರತುಪಡಿಸಿ 24 ಗಂಟೆ ಒಪಿಡಿ ಸೇವೆ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಲಕ್ಷಿö್ಮÃ ಪಾಟೀಲ್, ಡಾ.ಬಸವರಾಜ ನರಸಣಗಿ, ಡಾ.ಸಂಜೀವ್ ರಾಯಚೂರಕರ್, ಡಾ.ಸುರೇಶರಡ್ಡಿ, ಡಾ.ಪ್ರೇಮಾರಡ್ಡಿ, ಡಾ.ಜ್ಯೋತಿ ಕಟ್ಟಿಮನಿ, ಡಾ.ವಿವೇಕ ಕಟ್ಟಿ, ಡಾ.ಪ್ರಶಾಂತ ಬಾಸುತಕರ್, ಡಾ.ಜಗನ್ನಾಥ ರಡ್ಡಿ, ಡಾ.ಸಂತೋಷ ಪಾಟೀಲ್, ಡಾ.ವೀಣಾ ಪಾಟೀಲ್, ಡಾ.ಭ್ಯಾಗಶ್ರೀ ಹಾಗೂ ಡಾ.ಅಮೋಘ ಇತರರಿದ್ದರು.

ಯಿಮ್ಸ್ನಲ್ಲಿ ರೋಗಿಗಳ ಪರದಾಟ: ಯಿಮ್ಸ್ ಸೇರಿ ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ಸಾವಿರಾರು ರೋಗಿಗಳು ಪರದಾಡುವಂತಾಯಿತು. ಶುಕ್ರವಾರ ಕೈಗೊಂಡ ಈ ನಿರ್ಧಾರದಿಂದ ನಗರ ಸೇರಿ ಅನೇಕ ಗ್ರಾಮೀಣ ಭಾಗದಲ್ಲಿ ಮಾಹಿತಿ ಇಲ್ಲದೆ ಯಿಮ್ಸ್ (ಜಿಲ್ಲಾಸ್ಪತ್ರೆ)ಗೆ ಬಂದ 500ಕ್ಕೂ ಹೆಚ್ಚು ರೋಗಿಗಳು ಒಪಿಡಿ ಇಲ್ಲದೆ ಹಿಂತಿರುಗುವAತಾಯಿತು. ಉಮ್ಲಾನಾಯಕ ತಾಂಡಾದ ಸ್ವಪ್ಮಾ ಮಕ್ಕಳಿಗೆ ಜ್ವರ, ನೆಗಡಿ ಬಂದಿದೆ. ಕಡಿಮೆ ಆಗುತ್ತಿಲ್ಲ ಅಂತ ತಾಂಡಾದಿAದ ಬಂದಿz್ದೆÃನೆ. ಈಗೆಲ್ಲಿ ಹೋಗಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.