ಜಿಲ್ಲೆ

ಕೋಲಿ ಸಮಾಜಕ್ಕೆ ಖರ್ಗೆ ಕುಟುಂಬ ಮೋಸ

ಕಲಬುರಗಿ: ಕೋಲಿ ಸಮಾಜವನ್ನು ಎಸ್‌ಟಿ ಸೇರ್ಪಡೆ ಕುರಿತು ಎಲ್ಲ ಅರಿವಿದ್ದರೂ ೧೯೮೫ರಿಂದ ಕೋಲಿ ಸಮಾಜದ ಸಹಕಾರದಿಂದ ಅಧಿಕಾರದಲ್ಲಿ ಇರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸಮಾಜಕ್ಕೆ ಮೋಸ ಮಾಡುತ್ತಲೇ ಬಂದಿದ್ದು, ಇಂದಿನ ದುಸ್ಥಿತಿಗೆ ಕಾರಣ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಆರೋಪಿಸಿದರು.

೧೯೮೩ರಲ್ಲಿ ದೇವೇಂದ್ರಪ್ಪ ಜಮಾದಾರ ಎಸ್‌ಟಿ ಪ್ರಮಾಣ ಪತ್ರ ಪಡೆದಿರುವುದು ಸರಿ ಇದೆ ನ್ಯಾಯಾಲಯ ಆದೇಶಿಸಿತ್ತು. ಅದರ ಆಧಾರದಲ್ಲಿಯೇ ಅಂದು ಅಧಿಕಾರದಲ್ಲಿದ್ದ, ಪರಿಹಾರದ ಅರಿವು ಇದ್ದ ಮಲ್ಲಿಕಾರ್ಜುನ ಖರ್ಗೆ ಎಸ್‌ಟಿ ಪತ್ರ ಇಡೀ ಕೋಲಿ, ಕಬ್ಬಲಿಗ ಸಮಾಜಕ್ಕೆ ಕೊಡಿಸಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಮರೆಮಾಚಿ ಮೋಸ ಮಾಡಿದರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹಾವನೂರು ಆಯೋಗದ ಪ್ರಕಾರ ೨೦ ಪದ ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆಗ ಕೇಂದ್ರ ೨೦ ಪದ ಅಸಾಧ್ಯ, ೭-೮ ಪದ ಕಳುಹಿಸಿ ಎಂದಿತ್ತು. ಪುನಃ ರಾಜ್ಯ ಸರ್ಕಾರ ನಾಯ್ಕಡದ ಬಿಟ್ಟು ಹೋದ ಪದ ಪರ್ಯಾ ಪದಗಳೆಂದು ವಾಲ್ಮಿಕಿ, ನಾಯಕ, ಬೇಡ ಸೇರಿ ಐದು ಪದ ಕಳುಹಿಸಿತು. ೧೯೯೧ರಲ್ಲಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯೊಂದಿಗೆ ಆ ಜಾತಿಗಳನ್ನು ಸೇರಿಸಿದ್ದರು. ಆ ಪಟ್ಟಿಯ ಜತೆಗೆ ಅಂದಿನ ಕಾಂಗ್ರೆಸ್ ಸರ್ಕಾರ ಕೋಲಿ, ಕಬ್ಬಲಿಗ ಪದಗಳನ್ನು ಕೇಂದ್ರಕ್ಕೆ ಕಳುಹಿಸಲಿಲ್ಲ. ಆದ್ದರಿಂದ ಅನ್ಯಾಯ ನಿರಂತರವಾಗಿದೆ ಮುಂದುವರಿದಿದೆ ಎಂದರು.
೨೦೧೨ರಲ್ಲಿ ಕುಲಶಾಸ್ತಿçÃಯ ಅಧ್ಯಯನದಂತೆ ೭-೮ಪದ ಬಿಟ್ಟು, ಎಸ್‌ಟಿ ಸೇರ್ಪಡೆ ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಗಂಗಾಮತಸ್ಥ ಮತ್ತು ೩೭ ಪದಗಳನ್ನೇ ಕೇಂದ್ರಕ್ಕೆ ಕಳುಹಿಸಲಾಯಿತು. ಇದುವರೆಗೆ ಪದೇ ಪದೇ ಅದೇ ನಡೆದಿದೆ. ಇದೀಗ ದಿಢೀರ್ ಎಂದು ಪ್ರೀತಿ ತೋರಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅರಿವಿದ್ದರೂ ಉz್ದÉÃಶಪೂರ್ವಕವಾಗಿ ಪುನಃ, ಪುನಃ ಅದೇ ಪದಗಳನ್ನು ಕಳುಹಿಸಿ, ರಾಜಕೀಯ ಮಾಡುತ್ತಿದ್ದಾರೆ. ವಿಶ್ವದ ಎಲ್ಲವನ್ನು ಮಾತನಾಡುವ ಪ್ರಿಯಾಂಕ್ ಖರ್ಗೆಗೆ ಈ ವಿಷಯ ಅರಿವಿಗೆ ಬರುತ್ತಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಪ್ರಮುಖರಾದ ರಾಜು ಉಕ್ಕಲಿ, ಮರೆಪ್ಪ ಜಮಾದಾರ ಇದ್ದರು.