ಕೋಲಾರ: ತೆಲುಗು ಚಲನಚಿತ್ರ ನಟ ಮೆಗಾಸ್ಟರ್ ಚಿರಂಜೀವಿ ಮತ್ತು ಅವರ ಅಭಿಮಾನಿಗಳ ಸಾಮಾಜಿಕ ಸೇವೆ ಶ್ಲಾಘನೀಯವಾಗಿದದ್ದು ಎಂದು ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಅಭಿಪ್ರಾಯಪಟ್ಟರು.
ನಗರದ ಗಾಂಧಿವನದಲ್ಲಿ ಮೆಘಾಸ್ಟಾರ್ ಚಿರಂಜೀವಿ ಅವರ ಭಾವಚಿತ್ರದ ಎದುರು ಮಂಗಳವಾರ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿ, ಚಿರಂಜೀವಿ ಅಭಿಮಾನಿಗಳು ರಕ್ತದಾನ, ಅಂಗಾಂಗ ದಾನದ ಮೂಲಕ ದೇಶದಲ್ಲೇ ಹೆಸರು ಪಡೆದಿದ್ದಾರೆ. ಚಿರಂಜೀವಿ ಕೇವಲ ನಟ ಮಾತ್ರವಲ್ಲ, ಅವರ ಸಾಮಾಜಿಕ ಕಾಳಜಿ, ಬಡವರ ಬಗೆಗಿನ ಪ್ರೀತಿ ಮೆಚ್ಚುವಂತದ್ದು ಎಂದರು.
ಕಾಂಗ್ರೆಸ್ ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಚಿತ್ರಪ್ರೇಮಿಗಳ ಹೃದಯ ಗೆದ್ದಿರುವ ಚಿರಂಜೀವಿ ನರ‍್ಕಾಲ ಬಾಳಲಿ. ಕನ್ನಡ ಚಿತ್ರಗಳಲ್ಲೂ ನಟಿಸಿರುವ ಅವರು ಭಾಷಾ ಸೌಹಾರ್ಧತೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಈ ಬಾರಿ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಸಹಾ ಸೇರಿ ಚಿರಂಜೀವಿ ಹುಟ್ಟು ಹಬ್ಬ ಆಚರಿಸುವ ಮೂಲಕ ಸೌಹಾರ್ದತೆ ಮೆರೆದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಚಿರಂಜೀವಿ ಅವರ ಕನ್ನಡಪ್ರೇಮ ಮೆಚ್ಚುವಂತದ್ದು, ಕಲೆಗೆ ಜಾತಿ, ಮತ, ಭಾಷೆಯ ಬೇಲಿ ಇರುವುದಿಲ್ಲ. ತಮ್ಮ ನೂರಾರು ಚಲನಚಿತ್ರಗಳಲ್ಲಿನ ನಟನೆಯ ಮೂಲಕ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ಚಿರಂಜೀವಿ ಅವರ ಮತ್ತಷ್ಟು ಚಿತ್ರಗಳು ತೆರೆಗೆಬರಲಿ ಎಂದು ತಿಳಿಸಿದರು.
ಅಭಿಮಾನಿಗಳು ಚಿರಂಜೀವಿಗೆ ಜೈಕಾರ ಕೂಗಿದರು.
ಅಭಿಮಾನಿಗಳಾದ ಶ್ರೀನಿವಾಸಮೂರ್ತಿ, ನಾಗೇಶ್, ಕೋ.ನಾ.ಮಂಜುನಾಥ್, ಚಂದ್ರು, ಸಪ್ರೋಜ್, ಮುನಿವೆಂಕಟಯಾದವ್, ಚಲಪತಿ, ಮಣಿ, ಕ್ಯಾಪ್ಟನ್ ಮಂಜುನಾಥ್, ಡೆಕೋರೇಷನ್ ಕೃಷ್ಣ, ಏಜಾಜ್, ಪ್ಯಾರೇಜಾನ್ ಹಾಜರಿದ್ದು ಸಿಹಿ ಹಂಚಿ ಸಂಭ್ರಮಿಸಿದರು.