ಜಿಲ್ಲೆ

ಕೋಟ್ಯಂತರ ರೂ.ಪತ್ತೆ ಪ್ರಕರಣ, ತನಿಖೆಗೆ ಮುಂದಾದ ಪೊಲೀಸರು

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ದುಮ್ಮಿ ಬಳಿ ಬುಧವಾರ ಪತ್ತೆಯಾದ 8 ಕೋಟಿ ರೂ.ಮೊತ್ತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆ ತಾಲೂಕು ತೇಕಲವಟ್ಟಿ ಹರೀಶ್(ಚಾಲಕ)ಹಾಗೂ ಸಚಿನ್ ಅವ ರಿದ್ದ ಕಾರನ್ನು ಪೊಲೀಸರು ಬೆನ್ನಟ್ಟಿ ತಡೆದು, ಅದರಲ್ಲಿ ಆರು ಬ್ಯಾಗ್‌ಗಳಲ್ಲಿಟ್ಟಿದ್ದ ಹಣವನ್ನು ವಶಕ್ಕೆ ಪಡೆದು, ಕೆಪಿ ಆಕ್ಟ್ ಕಲಂ 98ರನ್ವಯ ಪ್ರ ಕರಣ ದಾಖಲಿಸಿಕೊಳ್ಳಲಾಗಿದೆ.
ಪಂಚರ ಸಮಕ್ಷಮ, ಬ್ಯಾಂಕ್‌ನೌಕರರು ಹಾಗೂ ನೋಟು ಎಣಿಸುವ ಯಂತ್ರಗಳ ನೆರವಿನೊಂದಿಗೆ ತಡ ರಾತ್ರಿವರೆಗೂ ಎಣಿಸಲಾಗಿ ದೆ. ಪತ್ತೆಯಾದ ಮೊತ್ತ 7,99,96000 ರೂ.ಎಂದು ಲೆಕ್ಕ ಸಿಕ್ಕಿದೆ.
ಅಡಕೆ ಖರೀದಿಗೆಂದು ಶಿವಮೊಗ್ಗದ ಮಲ್ನಾಡ್ ಟ್ರೇಡರ್ಸ್‌ ಮಾಲೀಕ ಸುರೇಶ್ ಎಂಬು ವರು ಹಣ ಕೊಟ್ಟಿದ್ದರು. ಆದರೆ ಅಡಕೆ ಖ ರೀದಿ ಸಾಧ್ಯವಾಗದೇ, ಅವರು ಕೊಟ್ಟಿದ್ದ ಹಣ ಹಿಂತಿರುಗಿಸಲು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗಿ ಸಚಿನ್ ತಿಳಿಸಿದ್ದಾರೆ. ಚಿತ್ರ ದುರ್ಗ ನಗರ ವ್ಯಾಪ್ತಿಯಿಂದ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡಿದ್ದರು.
ಕಾರು ಮತ್ತು ಹಣ ಯಾರಿಗೆ ಸೇರಿದ್ದು ಇತ್ಯಾದಿ ಮಾಹಿತಿಗಳು ತನಿಖೆಯಿಂದ ಗೊತ್ತಾಗಬೇಕಿದೆ. ಹಣವನ್ನು ಕೋರ್ಟಿಗೆ ಜಮಾ ಮಾ ಡಲಾಗುವುದು. ಬೃಹತ್ ಪತ್ತೆ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೂ ಮಾಹಿತಿ ಕೊಡಲಾಗಿದೆ. 10 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ದೊರೆತರೆ ಐಟಿಯವರಿಗೆ ತಿಳಿಸಬೇಕಾಗುತ್ತದೆ. ದೊರೆತಿರುವ ಮೊತ್ತದ ಕುರಿತಂತೆ ಕಾರಿನಲ್ಲಿದ್ದ ಇಬ್ಬರು ಸದ್ಯಕ್ಕೆ ಯಾವುದೇ ಸಮರ್ಪಕ ದಾಖಲೆಗಳನ್ನು ಕೊಟ್ಟಿಲ್ಲವೆಂದು ಎಸ್ಪಿ ಹೇಳಿದರು.