ಬಿವಿವಿ ಸಂಘದ ಮೈದಾನದಲ್ಲಿ ಯೋಗ ದಿನಾಚರಣೆ ಶಿಬಿರದಲ್ಲಿ ಭಾಗವಹಿಸಿದ ಜನಸ್ತೋಮ. 
ಜಿಲ್ಲೆ

ಕೋಟೆನಾಡು `ಯೋಗ' ಮಯ !

ಬಾಗಲಕೋಟೆ: ಜಿಲ್ಲಾದ್ಯಂತ ವಿವಿಧ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಯೋಗ ದಿನಾಚರಣೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು. ಕೋಟೆನಾಡು ಯೋಗ ಮಯವಾಗಿ ಮಾರ್ಪಟ್ಟಿತ್ತು.

೧೧ ನೇ ವರ್ಷದ ಯೋಗ ದಿನಾಚರಣೆಯಲ್ಲಿ ಜಿಲ್ಲಾದ್ಯಂತ ಮಕ್ಕಳು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡು ವಿಶೇಷ ಮೆರಗು ತಂದರು. ಯೋಗ ಬಗ್ಗೆ ಜನರಲ್ಲಿ ಹೆಚ್ಚಿರುವ ಆಸಕ್ತಿಯನ್ನು ಬಿಂಬಿಸಿತು. ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.

ಭಾರತದ ಯೋಗವು ಇಂದು ವಿಶ್ವದಾದ್ಯಂತ ಹೆಚ್ಚೆಚ್ಚು ಪ್ರಚೂರಗೊಂಡಿದ್ದು, ಜಿಲ್ಲೆಯಲ್ಲಿಯೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ವಿವಿಧೆಡೆ ಯೋಗ ಪ್ರದರ್ಶನಗಳು ನಡೆದವು. ಅನೇಕ ಯೋಗ ಪಟುಗಳು, ಗುರುಗಳು ಯೋಗ ಮಾಡಿಸುವುದರ ಜೊತೆಗೆ ಯೋಗದ ಮಹತ್ವ ಮತ್ತು ಅದರಿಂದ ದೊರೆಯುವ ಪ್ರಯೋಜಗಳ ಕುರಿತು ಮಾರ್ಗದರ್ಶನ ನೀಡಿದರು. ಉತ್ತಮ ಸಮಾಜ, ಸುದೃಢ ಆರೋಗ್ಯಕ್ಕೆ ಯೋಗದಿಂದ ಮಾತ್ರ ಸಾಧ್ಯ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಯಿತು.

ಬಿವಿವಿ ಸಂಘದ ಮೈದಾನದಲ್ಲಿ:

ನಗರದ ಪ್ರತಿಷ್ಠಿತ ಬಿವಿವಿ ಸಂಘದ ವಿವಿಧ ಅಂಗ ಸಂಸ್ಥೆಗಳು ಕಾಲೇಜು ಮೈದಾನ, ವಿದ್ಯಾಗಿರಿಯ ಇಂಜನಿಯರಿAಗ್ ಕಾಲೇಜ್ ಮೈದಾನ ಹಾಗೂ ನವನಗರದ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ಬಿವಿವಿ ಸಂಘದ ೩ ಸಾವಿರ ಸಿಬ್ಬಂದಿ, ೧೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡಿದರು.

ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ದಂಡಾಸನ, ಭದ್ರಸಾನ, ವಜ್ರಾಸನ,ಉತ್ಥಾಸನಮಂಡೊಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನಪಾದಾಸನ, ಶವಾಸನ, ಓಂಕಾರ, ಕಪಾಲಬಾತಿ, ಶವಾಸನ, ಶಲಬಾಸನ, ಪ್ರಾಣಾಯಾಮ, ಪವನ ಮುಕ್ತಾಸನ ಪ್ರಾಣಯಾಮ ಸೇರಿದಂತೆೆ ವಿವಿಧ ಆಸನಗಳಲ್ಲಿ ಯೋಗ ಪ್ರದರ್ಶಿಸಲಾಯಿತು. ಎಲ್ಲ ಆಸನಗಳನ್ನು ೪೫ ನಿಮಿಷಗಳ ಕಾಲ ಸಾಮೂಹಿಕವಾಗಿ ಪ್ರಸ್ತುತ ಪಡಿಸಲಾಯಿತು.

ಬೆಳಗ್ಗೆ ೬.೩೦ ಗಂಟೆ ೭.೩೦ ಗಂಟೆ ವರೆಗೆ ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದ ಯೋಗ ವಿಭಾಗದ ತಜ್ಞರಿಂದ ಹಳೆ ಆವರಣದ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮವು ಜರುಗಿತು. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಶಿಕ್ಷಣ, ಪಾಲಿಟೆಕ್ನಿಕ್, ದಂತ ಮಹಾವಿದ್ಯಾಲಯ, ಔಷಧ ವಿಜ್ಞಾನ ಇತ್ಯಾದಿ ಶಾಲಾ ಕಾಲೇಜ್‌ಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಗಳ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಆಯುಷ್ಯ ವೈದ್ಯಕೀಯ ಕಾಲೇಜುಗಳ ಮತ್ತು ಔಷದ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹೈಸ್ಕೂಲ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಸಂಘದ ಆಡಳಿತಾಽಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಸಂಘದ ಮುಖ್ಯ ಸಲಹೆಗಾರತಿ ಡಾ.ಮೀನಾ ಚಂದಾವರಕರ ಭಾಗವಹಿಸಿದ್ದರು.

ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿAಗ್ ಕಾಲೇಜು ಆವರಣದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು. ಬಸವೇಶ್ವರ ಇಂಜನಿಯರಿAಗ್ ಕಾಲೇಜ ಆವರಣದಲ್ಲಿ ಪತಂಜಲಿ ಘಟಕದಿಂದ ಯೋಗ ಶಿಬಿರ ಜರುಗಿತು. ಅಲ್ಲದೆ ಬಿವಿವಿ ಸಂಘದ ಅಡಿಯಲ್ಲಿರುವ ವಿವಿಧ ಗ್ರಾಮೀಣ ಭಾಗದ ಶಾಲಾ, ಕಾಲೇಜ್‌ಗಳಲ್ಲಿಯು ಯೋಗ ದಿನಾಚರಣೆ ಅದ್ಧೂರಿಯಾಗಿ ಜರುಗಿತು. ಹೀಗೆ ಬಿವಿವಿ ಸಂಘವು ಕಳೆದ ೧೦ ವರ್ಷಗಳಿಂದ ಯೋಗದ ಮಹತ್ವ ಸಾರುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತರರಾಷ್ಟಿçÃಯ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಪಿ.ಎಂ.ಎನ್.ಎ0 ದಂತ ಮಹಾವಿದ್ಯಾಲಯ, ಸಜ್ಜಲಶ್ರೀ ನರ್ಸಿಂಗ್ ಕಾಲೇಜ್, ಶಾರದಾಂಬೆ ನರ್ಸಿಂಗ್ ಕಾಲೇಜ್ ಮತ್ತು ಫಿಜಿಯೋಥೆರಪಿ ಕಾಲೇಜುಗಳ ಸಹಯೋಗದೊಂದಿಗೆ ನಡೆದ ಯೋಗ ದಿನಾಚರಣೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಬಿವಿವಿ ಸಂಘದ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ನೇತೃತ್ವ ವಹಿಸಿದ್ದರು. ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಯೋಗ ಪರಿಣಿತ ವೈದ್ಯರಾದ ಡಾ.ಅಶೋಕ ಬಡಕಲಿ ಇತರರು ಇದ್ದರು.

ಯೋಗದಿಂದ ಸಮೃದ್ಧಿ..

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಉಡುಪಿ ಪೇಜಾವರಮಠದ ಮಠಾಽÃಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಯೋಗದಿಂದ ಜೀವನ ಹಾಗೂ ದೇಹ, ಮನಸ್ಸು ಸಮೃದ್ಧಿಗೊಳ್ಳುತ್ತದೆ. ಯೋಗ ಜಗತ್ತಿನ ಉದ್ದಗಲಕ್ಕೂ ವ್ಯಾಪಿಸಿದ್ದು, ದೈಹಿಕ ಹಾಗೂ ಮನೋಬಲ ಜೋಡಿಸುವುದೇ ಯೋಗವಾಗಿದ್ದು, ಯೋಗಕ್ಕೆ ಒಂದೂ ಗೂಡಿಸುವ ಶಕ್ತಿ ಇದೆ ಎಂದರು.

ಯೋಗ ಎಂದರೆ ಕೂಡಿಸುವುದು, ಜೋಡಿಸುವುದು ಎಂದರ್ಥ. ಶರೀರದಲ್ಲಿ ಸ್ವಾಸ್ಥ್ಯ ಕೂಡಿಸುವುದೆ ಯೋಗ ವಾಗಿದೆ. ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ ಕೂಡಿಕೊಂಡು ದ್ಯಾನದ ಸ್ವಾಸ್ಥ್ಯದ ಮೂಲಕ ಆತ್ಮ ಭಗವಂತನಲ್ಲಿ ಸಾಕ್ಷಾತ್ಕಾರ ಗೊಳಿಸುವ ವಿದ್ಯೆಯೇ ಯೋಗ ವಾಗಿದೆ. ಭಾರತೀಯ ಎಲ್ಲ ಶಾಸöಗಳ ಪರಮ ಗುರಿ ಭಗವಂತನನ್ನು ಸೇರುವುದು, ಅದುವೇ ಮೊಕ್ಷ. ಅದಕ್ಕೆ ಯೋಗ ಬಹಳಷ್ಟು ಅಗತ್ಯವಾಗಿದೆ. ಈ ವಿದ್ಯೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಈ ಹಿಂದಿನ ಕಾಲದ ಬದುಕಿನ ಪ್ರತಿ ನಡೆಯು ಕೂಡಾ ಒಂದೊAದು ಯೋಗಾಭ್ಯಾಸವಾಗಿತ್ತು, ಆದರೆ ಇವತ್ತು ನಮ್ಮ ಬದುಕಿಗೆ ನಾವು ಯಂತ್ರಗಳನ್ನು ಬಹುವಾಗಿ ಅವಲಂಬಿಸಿz್ದÉವೆ, ನಮ್ಮ ಬದುಕು ಯಾಂತ್ರಿಕ ಬದುಕಾಗಿದೆ, ಈ ಹಂತದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವಂತಹ ವ್ಯಾಯಾಮ ದೊರಕದೆ ಹೋದಾಗ ಅನಾರೋಗಕ್ಕೆ ಒಳಪಡುತ್ತದೆ, ಇದನ್ನು ಮನಗಂಡ ನಮ್ಮ ಪ್ರಾಚೀನ ಋಷಿ ಮುನಿಗಳು ಇಂಥ ಯೋಗ ವಿದ್ಯ ನೀಡಿz್ದÁರೆ, ಇಂದಿನ ಪಿಳಿಗೆ ಜೀವನದಲ್ಲಿ ಯೋಗವನನ್ನು ಹೆಚ್ಚು ಅಳವಡಿಸಿಕೊಳ್ಳಬೇಕು, ಸಂಘ ಹಾಗೂ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಬೃಹತ ಯೋಗ ಸಂಘಟಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಡಿತ ಅರಬ್ಬಿ, ಎಸ್.ಆರ್.ಮನಹಳ್ಳಿ, ಶಿವಲಿಂಗಪ್ಪ ಮೋರಬ, ಕುಮಾರ ಜಿಗಜಿನ್ನಿ ಇದ್ದರು. ಡಾ.ವೀಣಾ ಪತ್ತಾರ ನಿರೂಪಿಸಿದರು, ವೈಷ್ಣವಿ ಜಾಧವ ಪ್ರಾರ್ಥಿಸಿದರು. ಡಾ.ವಿ.ಎಸ್.ಚೌದರಿ ವಂದಿಸಿದರು.