ಜಿಲ್ಲೆ

ಕೋಟೆನಾಡಿನಲ್ಲಿ ಹನುಮ ಜಯಂತಿ ಸಂಭ್ರಮ

ಬಾಗಲಕೋಟೆ: ವಾಯು ಪುತ್ರ ಹನುಮ ಜಯಂತಿಯನ್ನು ನಗರದ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು

.
ಜಿಲ್ಲೆಯ ಪ್ರಸಿದ್ಧ ಆಂಜನೇಯ ದೇವಸ್ಥಾನಗಾದ ಬಾಗಲಕೋಟೆ ತಾಲೂಕಿನ ತುಳಸಿಗೇರಿ, ಅಚನೂರ ಹನುಮಂತ ದೇವರು(ವಾರೀಶ) ಸೇರಿದಂತೆ ಮುಧೋಳ, ಜಮಖಂಡಿ, ಬೀಳಗಿ, ತೇರದಾಳ, ರಬಕವಿ-ಬನಹಟ್ಟಿ, ಬಾದಾಮಿ, ಹುನಗುಂದ, ಕಮತಗಿ, ಅಮೀನಗಡ, ಗುಳೇದಗುಡ್ಡ, ಕಲಾದಗಿ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮದಿಂದ ಜಯಂತಿ ಆಚರಿಸಲಾಯಿತು.


ಬೆಳಗ್ಗೆ ದೇವರಿಗೆ ಅಭಿಷೇಕ, ಅಲಂಕಾರ, ಪವಮಾನ ಹೋಮ, ಸತ್ಯ ನಾರಾಯಣ ಪೂಜೆ, ತೊಟ್ಟಿಲೋತ್ಸವ ಸೇರಿದಂತೆ ನಾನಾ ಧಾಮಿಕ ಕಾರ್ಯಕ್ರಮಗಳು ಜರುಗಿದವು. ಹನುಮಾನ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದುಕೊಂಡರು. ಪಾನಕ, ಕೂಸಂಬರಿ ಪ್ರಸಾದ ನೀಡಲಾಯಿತು. ಹಲವೆಡೆ ರಥೋತ್ಸವ ಜರುಗಿತು.
ಬಾಗಲಕೋಟೆ ನಗರದ ಹೊಳೆ ಆಂಜನೇಯ ದೇವಸ್ಥಾನ, ವೆಂಕಟಪೇಟ ದೇವಾಲಯ ಹನುಮಾನ ಮಂದಿರ, ರಾಘ ವೇಂದ್ರಸ್ವಾಮಿಗಳ ಮಠ, ಕೃಷ್ಣಮಠ, ಮನಹಳ್ಳೇಶ, ಮನ್ನಿಕಟ್ಟಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.