ಜಿಲ್ಲೆ

ಕೋಟೆನಾಡಿಗೆ ಹರಿದು ಬಂದ ಕೋಟಿ ಲಕ್ಷ್ಮಿ

ಸಂತೋಷ ದೇಶಪಾಂಡೆ

ಸಂತೋಷ ದೇಶಪಾಂಡೆ ಬಾಗಲಕೋಟೆ:

ಬೆಲೆ ಏರಿಕೆ, ದುಬಾರಿ ಜೀವನದಿಂದ ತತ್ತರಿಸಿದ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಗಲು, ಸಂಸಾರ ನಿರ್ವಹಣೆಗೆ ಅನುಕೂಲವಾಗಲು ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಕಳೆದ ಒಂದು ವರೆ ವರ್ಷದಲ್ಲಿ ಕೋಟೆನಾಡಿಗೆ ಬರೋಬ್ಬರಿ ಎಂಟು ನೂರು ಕೋಟಿ ರೂ. ಅಽಕ ಮೊತ್ತ ಫಲಾನುಭವಿಗಳು ಖಾತೆಗೆ ಜಮೆಯಾಗಿದೆ..!!

ಹೌದು, ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮೆಯಾಗುತ್ತಿದೆ. ೨೦೨೩ ಜುಲೈದಿಂದ ೨೦೨೪ ನೇ ಸಾಲಿನ ಆಗಸ್ಟ್ ವರೆಗೆ ಜಮೆಯಾಗಿದೆ. ಎರಡು ಸಾವಿರ ರೂ. ಹಣ ಫಲಾನುಭವಿಗಳ ಸಂಖ್ಯೆ ಜಿಲ್ಲೆಯಲ್ಲಿ ೪ ಲಕ್ಷ ಗಡಿದಾಟಿದೆ. ಜಿಲ್ಲೆಯ ಪ್ರತಿಯೊಂದು ತಾಲೂಕು ಸರಾಸರಿ ಶೇ.೯೦ ರಿಂದ ಶೇ.೯೫ ವರೆಗೂ ಪ್ರಗತಿ ಸಾಽಸಿವೆ. ಅದರಲ್ಲೂ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿಗೆ ಅಽಕ ಪ್ರಮಾಣದಲ್ಲಿ ಲಾಭ ತಟ್ಟಿದೆ. ಆದರೇ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಬೇರೆ ಚಿಂತನೆಗೆ ಒಳಪಡಿಸಿದೆ.

ಗೃಹ ಲಕ್ಷ್ಮಿ ಯಿಂದ ಆರ್ಥಿಕ ವಹಿವಾಟು ದ್ವಿಗುಣ?

ಗೃಹ ಲಕ್ಷ್ಮಿ ಯೋಜನೆ ಮೂಲಕ ಕುಟುಂಬಗಳ ಆರ್ಥಿಕ ಭಾರಕ್ಕೆ ಆಸರೆಯಾಗಿರುವುದಂತು ಸತ್ಯ. ಮುಖ್ಯವಾಗಿ ಬೆಲೆ ಏರಿಕೆ, ದುಬಾರಿ ಜೀವನ ಶೈಲಿಗೆ ಬಡ, ಮಧ್ಯಮ ವರ್ಗದ ಕುಟುಂಬಗಳು ನಲುಗಿ ಹೋಗಿದ್ದವು. ಅಂತ ಕುಟುಂಬಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಧನ ಜಮೆ ಚೈತನ್ಯ ನೀಡಿದೆ. ಆದರೇ ವಾಸ್ಥವದಲ್ಲಿ ಆರ್ಥಿಕ ವಹಿವಾಟಿನಲ್ಲಿ ಪ್ರಗತಿ ಹೇಳುಕೊಳ್ಳುವ ಮಟ್ಟಿಗೆ ಆಗುತ್ತಿಲ್ಲ ಎನ್ನುವುದೇ ವ್ಯಾಪಾರಸ್ಥರ ನೋವು. ಫಲಾನುಭವಿಗಳ ಕೈಗೆ ಸೇರಿದ ಗೃಹ ಲಕ್ಷ್ಮಿ ಮಾರುಕಟ್ಟೆಯತ್ತ ಅಽಕ ಪ್ರಮಾಣದಲ್ಲಿ ಧಾವಿಸುತ್ತಿಲ್ಲ. ಇದರ ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೇ ಕಿರಾಣಿ, ಚಿನ್ನಾಭರಣ ವ್ಯಾಪಾರ, ಸಗಟು ವ್ಯಾಪಾರದಲ್ಲಿ ಬಹಳಷ್ಟು ಏರಿಕೆ ಕಂಡಿಲ್ಲ. ಆರ್ಥಿಕ ವಹಿವಾಟು ದ್ವಿಗುಣಗೊಳ್ಳುವ ಕನಸು ಕಂಡಿದ್ದ ಜಿಲ್ಲೆಯ ವ್ಯಾಪಾರಸ್ಥರ ನಿರೀಕ್ಷೆ ಹುಸಿಗೊಳಿಸಿದೆ. ಕಳೆದ ಎರಡು ವರ್ಷದ ಗಣೇಶ ಚತುರ್ಥಿ, ದಸಾರ, ದೀಪಾವಳಿ, ಯುಗಾದಿ, ರಂಜಾನ್, ಬಕ್ರೀದ್, ಈದ್ ಮಿಲಾದ್, ಬಕ್ರೀದ್, ಮೊಹರಂ ಹಬ್ಬಗಳ ಸಂದರ್ಭದಲ್ಲಿ ವ್ಯಾಪಾರವೇ ಸಾಕ್ಷಿಕರಿಸಿವೆ.

ಹಾಗಾದರೇ ಎಲ್ಲಿ ಹೋಯಿತು ಹಣ :

ಫಲಾನುಭವಿಗಳ ಖಾತೆಗೆ ಜಮೆಯಾಗುವ ಹಣ ವಿಥ್ ಡ್ರಾ ಆಗುತ್ತಿಲ್ಲ. ವಿಥ್ ಡ್ರಾ ಆದರು ಸಹ ಅದು ಮಾರುಕಟ್ಟೆಗೆ ಅಽಕ ಪ್ರಮಾಣದಲ್ಲಿ ಬರುತ್ತಿಲ್ಲ. ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಹೆಣ್ಣು ಮಕ್ಕಳು ಗೃಹ ಲಕ್ಷ್ಮಿ ಕಾಪಿಟ್ಟುಕೊಳ್ಳುವದರಲ್ಲಿ ನಿರತರಾಗಿರಾಗಿದ್ದಾರೆ. ಉಳಿದಂತೆ ಕಿರಾಣಿ, ಬಟ್ಟೆ, ಚಿನ್ನಾಭರಣ ವಹಿವಾಟುಗ್ಗಿಂತ ಮೊಬೈಲ್, ಟಿವಿ, ಬೈಕ್ ಸೇರಿದಂತೆ ಇಲೇಟ್ರಾನಿಕ್ ಗೂಡ್ಸ್ ಖರೀದಿ ಮೇಲೆ ಅತೀ ಹೆಚ್ಚು ಬಳಕೆಯಾಗುತ್ತಿದೆ. ಅದು ಸ್ಥಳೀಯ ಆರ್ಥಿಕತೆಗೆ ಬೂಸ್ಟರ ನೀಡುತ್ತಿಲ್ಲ. ಬಹುದೊಡ್ಡ ನಿರೀಕ್ಷೆಯಲ್ಲಿದ್ದ ಸ್ಥಳೀಯ ವ್ಯಾಪಾರಸ್ಥರು ಗೃಹ ಲಕ್ಷ್ಮಿ ಯೋಜನೆ ಲಾಭವು ಇಲ್ಲ. ನಷ್ಟವು ಆಗಿಲ್ಲ ಎನ್ನುತ್ತಾರೆ. ಈ ಹಿಂದಿನ ಎರಡು ಮೂರು ವರ್ಷದ ವ್ಯಾಪಾರದಂತೆ ಇಂದಿಗೂ ಹಾಗೇ ಸಾಗಿದೆ ಅಂತ ವಿಜಯವಾಣಿ ಎದುರು ಬಾಗಲಕೋಟೆ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಾಗರಾಜ ಕುಪ್ಪಸ್ತ, ಸರಾ-À ವರ್ತಕರ ಸಂಘದ ಅಧ್ಯಕ್ಷ ದಿನೇಶ ಬಾರ್ಸಿ ವಿಶ್ಲೇಷಣೆ ನಡೆಸಿದರು.

ಆರೋಗ್ಯ- ಶಿಕ್ಷಣಕ್ಕೆ ಬಳಕೆ:

ಬಡತನದಲ್ಲಿರುವ ಕುಟುಂಬಗಳು ಗೃಹ ಲಕ್ಷ್ಮಿ ಹಣ ಕೂಡಿಕೊಂಡು ಇನ್ನಿತರ ಖರ್ಚುಗಳಿಗೆ ರಹದಾರಿ ಮಾಡಿಕೊಂಡಿಲ್ಲ. ಬದಲಾಗಿ ಆರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ, ವೈದ್ಯರ ಚಿಕಿತ್ಸೆ, ಔಷಽಗೆ ಹಾಗೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಬಹಳಷ್ಟು ಅನುಕೂಲವಾಗಿದೆ. ಹಣವಿಲ್ಲದೇ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಈಗ ತಕ್ಷಣಕ್ಕೆ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ ಎನ್ನುವ ಧೈರ್ಯವಿದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ನಮ್ಮಂತಹ ಬಡವರಿಗೆ ಗೃಹ ಲಕ್ಷ್ಮಿ ದೊಡ್ಡ ಭಾಗ್ಯವಾಗಿದೆ. ಸಾಲ ಪಾವತಿಸಲು ಅನುಕೂಲವಾಗಿದೆ ಎಂದು ಹೇಳುತ್ತಲೆ ಗೃಹ ಲಕ್ಷ್ಮಿ ಫಲಾನುಭವಿಗಳ  ಬಾಗಲಕೋಟೆ ಗಂಗವ್ವ ಹಂಚನಾಳ ಕಣ್ಣಾಲೆಗಳು ತೇವಗೊಂಡವು.