ಜಿಲ್ಲೆ

ಕೋಟೆನಾಡಲ್ಲಿದೆ ಪಾಸಿಟಿವ್ ಎನರ್ಜಿ

ಚಿತ್ರದುರ್ಗ: ಚಿತ್ರದುರ್ಗಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿಗೆ ಬಂದೊಡನೆ ಪಾಸಿಟಿವ್ ಎನರ್ಜಿ ಹೆಚ್ಚಲಿದೆ. ಜೋಗಿ, ಮೈಲಾರಿ ಧ್ವನಿಸುರುಳಿ ಇಲ್ಲಿಯೇ ಬಿಡುಗಡೆಯಾಗಿ ಯಶಸ್ಸು ಕಂಡ ಚಿತ್ರಗಳು. ಅದಕ್ಕಾಗಿ 127ನೇ ಸಿನಿಮಾದ ಪ್ರಚಾರ ಕೂಡ ಇಲ್ಲಿಂದ ಆರಂಭಿಸಿದ್ದೇವೆ ಎಂದು ನಟ ಶಿವರಾಜ್‌ಕುಮಾರ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕೋಟೆನಾಡು ಎಂದೊಡನೆ ನಿರ್ದೇಶಕ ಪುಟ್ಟಣ್ಣ ಕಣಗಲ್, ವಿಷ್ಣು ಸರ್, ನಾಗರಹಾವು ಸಿನಿಮಾ ಕಣ್ಣ ಮುಂದೆ ಬರುತ್ತದೆ. ಅಣ್ಣಾವ್ರ ಇಲ್ಲಿಗೆ ಸಾಕಷ್ಟು ಬಾರಿ ಬಂದಿದ್ದಾರೆ. ವಿಷ್ಣುವರ್ಧನ್-ಶಂಕರ್‌ನಾಗ್, ಅಂಬರೀಷ್-ವಿಷ್ಣುವರ್ಧನ್ ಕಾಂಬಿನೇಷನ್ ಸಿನಿಮಾಗಳು ಹಿಟ್ ಆಗಿವೆ. ಆ ಸಾಲಿಗೆ ಇದು ಸೇರುವ ವಿಶ್ವಾಸವಿದೆ ಎಂದರು.