ಬಾಗಲಕೋಟೆ: ಗಿನ್ನೀಸ್ ಬುಕ್ ಆಪ್ ರಿಕಾರ್ಡ್ಸ ದಾಖಲೆಗಾಗಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಹಮ್ಮಿಕೊಂಡಿದ್ದ ಯೋಗಾಥಾನ್ ಸಾಮೂಹಿಕ ಯೋಗ ಕಾರ್ಯಕ್ರಮ ಕೋಟೆನಗರಿಯಲ್ಲಿ ಭಾನುವಾರ ಯಶಸ್ವಿಯಾಗಿ ಜರುಗಿತು. ಬಿವಿವಿ ಸಂಘದ ಹಳೇ ಮೈದಾನದಲ್ಲಿ ೧೫ ಸಾವಿರಕ್ಕೂ ಹೆಚ್ಚು ಯೋಗ ಪಟುಗಳು ಒಂದೇ ಸಮಯಕ್ಕೆ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು.
ಯೋಗಾಥಾನ್‌ದಲ್ಲಿ ತಾಡಾಸನ, ಪದ್ಮ ಹಸ್ತಾಸನ, ಅರ್ಧ ಚಕ್ರಾಸನ, ತ್ರೀಕೋನಾಸನ, ಭದ್ರಾಸನ, ಅರ್ಧ ಉಸ್ತ್ರಾಸನ, ವಕ್ರಾಸನ, ಭುಜಂಗಾಸನ, ಮಕರಾಸನ, ಪವನ ಮುಕ್ತಾಸನ, ಪ್ರಾಣಾಯಾಮ ಸೇರಿದಂತೆ ೪೧ ಮಿನಿಷಗಳ ಕಾಲ ೩೦ ವಿವಿಧ ಆಸನಗಳನ್ನು ಮಾಡಲಾಯಿತು. ಏಕ ಕಾಲದಲ್ಲಿ ಓಂಕಾರ ಹೇಳುವ ಮೂಲಕ ಏಕತೆ ಸಾರಲಾಯಿತು. ಸಾವಿರಾರು ಜನ ಆಸನಗಳನ್ನು ಮಾಡುವ ದೃಶ್ಯ ಆಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಒಂದು ಮುಖ್ಯ ವೇದಿಕೆ ಹಾಗೂ ೨೦ ಮಿನಿ ವೇದಿಕೆಗಳನ್ನು ಹಾಕಲಾಗಿತ್ತು. ಪತಂಜಲಿ ಯೋಗ ಸಂಸ್ಥೆಯಿಂದ ೮೪ ಯೋಗ ಬೋಧಕರು ಯೋಗಾಭ್ಯಾಸ ಮಾಡಿಸಿದರು. ಎನ್‌ಸಿಸಿ ಕೆಡೆಟ್ಸ್ ಗಳನ್ನು ಸ್ಟೀವರ್ಡ್ಸ ಕರ್ತವ್ಯಕ್ಕಾಗಿ ನೇಮಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಮಿಸಿರುವ ಯೋಗಪಟುಗಳಿಗೆ ೧೫ ಬ್ಲಾಕ್‌ಗಳನ್ನು ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನ ಮಾಡಿ ಯೋಗಪಡುಗಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಯೋಗಾಥಾನ್‌ದಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ, ನರ್ಸಿಂಗ್, ಫರ‍್ಮಸಿ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಸಹ ಭಾಗವಹಿಸಿದ್ದರು.
ಮೈದಾನದಲ್ಲಿ ಹೊದಿಕೆ, ಬ್ಯಾರಿಕೇಡ್, ಮಾರ್ಕಿಂಗ್, ಧ್ವನಿ ವರ್ಧಕ ಅಳವಡಿಸುವದರ ಜೊತೆಗೆ ಸಿಸಿಟಿವಿ ಸಹ ಅಳವಡಿಸಲಾಗಿತ್ತು. ತಾತ್ಕಾಲಿಕ ಶೌಚಗೃಹ ವ್ಯವಸ್ಥೆ, ಭಾಗವಹಿಸಿದವರಿಗೆ ಅಲ್ಪೋಪಹಾರದ ವ್ಯವಸ್ಥೆ ಸಹ ಕಲ್ಪಿಸಲಾಗುತ್ತು. ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಕೊನೆಗೆ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಸಾಮೂಹಿಕ ಯೋಗಾಭ್ಯಾಸದಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆಯುಷ ಅಽಕಾರಿ ಅಕ್ಕಮಹಾದೇವಿ ಗಾಣಿಗೇರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಅಽಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಬಾಕ್ಸ್ . . .
ಉತ್ತಮ ಪ್ರದರ್ಶನ : ಶಾಲಾ-ಕಾಲೇಜುಗಳಿಗೆ ಪ್ರಶಸ್ತಿ
ಯೋಗಾಥಾನ್ ಕಾರ್ಯಕ್ರಮದಲ್ಲಿ ಉತ್ತಮವಾಗಿ ಯೋಗ ಪ್ರದರ್ಶಿಸಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನಿಯರಿಂಗ್ ಕಾಲೇಜ, ಪದವಿ ಪೂರ್ವ ಕಾಲೇಜ, ನ್ಯೂ ಇಂಗ್ಲೀಷ ಮಿಡಿಯಮ್ ಶಾಲೆ ಹಾಗೂ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆ (ಬಿಟಿಡಿಎ)ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.