ಬಾಗಲಕೋಟೆ ನಗರದ ಬೈಪಾಸ್ ರಸ್ತೆಯಲ್ಲಿರುವ ಚರ್ಚ್ನಲ್ಲಿ ಏಸುವಿನ ಬದುಕಿನ ಕುರಿತು ಚಿತ್ರಣ 
ಜಿಲ್ಲೆ

ಕೋಟೆನಾಡಲ್ಲಿ ಕ್ರಿಸ್‌ಮಸ್ ಆಚರಣೆ

ಬಾಗಲಕೋಟೆ: ಮನುಕುಲಕ್ಕೆ ಪ್ರೀತಿಯ ಸಂದೇಶ ಸಾರಿದ ಸಂತ ಏಸು ಕ್ರಿಸ್ತರ ಜನುಮ ದಿನ ಅಂಗವಾಗಿ ಜಿಲ್ಲೆಯ ವಿವಿಧೆಡೆ ಕ್ರಿಸ್‌ಮಸ್ ಆಚರಿಸಲಾಯಿತು, ಕ್ರೆÊಸ್ತ ಸಮುದಾಯದವರು ಮೋಬತ್ತಿ ಬೆಳಗಿ ಮಂಗಳವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕ್ರಿಸ್‌ಮಸ್ ಆಚರಣೆ ಹಬ್ಬದ ಸಂತಸ ಇಮ್ಮಡಿಕೊಳಿಸಿತ್ತು, ಮಕ್ಕಳು, ಹಿರಿಯರು ಆದಿಯಾಗಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಹಬ್ಬದ ಶುಭ ಸಂದೇಶ ಕಳುಹಿಸಿ ಪರಸ್ಪರ ಶುಭಾಶಯ ಕೋರಿದರು. ಕ್ರೆÊಸ್ತರೆಲ್ಲ ಒಂದೇಡೆ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಿದರು, ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಿಸಿದರು. ಆತ್ಮೀಯರಿಗೆ, ಸ್ನೇಹಿತರಿಗೆ ಚೂಡಾ, ಚಕ್ಕಲಿ, ಉಂಡೆ ಸೇರಿದಂತೆ ನಾನಾ ವಿಶೇಷ ಖಾದ್ಯಗಳನ್ನು ಉಣಬಡಿಸಿದರು.

ನವನಗರದ, ಹಳೇ ಬಾಗಲಕೋಟೆ, ಮುಧೋಳ, ಜಮಖಂಡಿ, ಬಾದಾಮಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಚರ್ಚೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಿದವು. ಏಸುವಿನ ಬಾಲ್ಯ, ಬದುಕು ಸೇರಿದಂತೆ ಜೀವನ ಚರಿತ್ರೆಗಳನ್ನು ಸಾರುವ ಚಿತ್ರಪಟ, ಗೊಂಬೆಗಳ ಪ್ರದರ್ಶನ ವೀಕ್ಷಿಸಿದರು. ರಾತ್ರಿ ೧೨ ಗಂಟೆಯಿAದ ಚರ್ಚ, ಪ್ರಾರ್ಥನಾ ಮಂದಿರಗಳಲ್ಲಿ ನೂರಾರು ಜನ ಆಗಮಿಸಿದರು. ಏಸು ಕ್ರಿಸ್ತರ ಸಂದೇಶ, ಮಹತ್ವದ ಸಾರವನ್ನು ಪಾದ್ರಿಗಳು ಪ್ರವಚನ ನೀಡಿದರು. ಕ್ರಿಸ್‌ಮಸ್ ಟ್ರೀಗೆ ವಿಶೇಷ ಅಲಂಕಾರ ಮಾಡಿ ಅದ್ದೂರಿಯಾಗಿ ಆಚರಿಸಿದರು.

ನವನಗರ, ಹಳೇ ಬಾಗಲಕೋಟೆ, ಗುಳೇದಗುಡ್ಡ, ಮುಧೋಳ, ಜಮಖಂಡಿ, ಬಾದಾಮಿ ತಾಲೂಕಿನ ಮುಷ್ಠಿಗೇರಿ, ಆಡಗಲ್, ಕಟವಳ್ಳಿ-ಆಸಂಗಿ ಸೇರಿದಂತೆ ಜಿಲ್ಲೆಯಲ್ಲಿ ಕ್ರೆÊಸ್ತ ಬಾಂಧವರು ಹೆಚ್ಚಾಗಿ ವಾಸಿಸುವ ಮನೆಗಳಲ್ಲಿ ಕ್ರಿಸ್‌ಮಸ್ ಸಂಭ್ರಮ, ಸಡಗರ ಮನೆ ಮಾಡಿತ್ತು.