ಬಾಗಲಕೋಟೆ ನಗರದಲ್ಲಿ ಶುಕ್ರವಾರ ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಭಾವಚಿತ್ರದ ಅದ್ದೂರಿ ಮೆರವಣಿಗೆ.  
ಜಿಲ್ಲೆ

ಕೋಟೆನಗರಿಯಲ್ಲಿ ಶಂಕರಾಚಾರ್ಯರ ಭವ್ಯ ಮೆರವಣಿಗೆ

ಬಾಗಲಕೋಟೆ: ಜಗದ್ಗುರು ಆದಿ ಶಂಕಚಾರ್ಯರ ಜಯಂತಿ ಉತ್ಸವವು ಇಲ್ಲಿನ ವಿನಾಯಕ ನಗರದಲ್ಲಿರುವ ನೂತನ ಶೃಂಗೇರಿ ಶಂಕರಮಠದಲ್ಲಿ ಸಡಗರ, ಸಂಭ್ರಮದಿ0ದ ಆರಂಭಗೊ0ಡಿದ್ದು, ಶ್ರೀ ಚಂದ್ರಮೌಳೇಶ್ವರ ಹಾಗೂ ಶಂಕರಾಚಾರ್ಯರ ಮೂರ್ತಿಗಳಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.

ನೂರಾರು ಭಕ್ತರು ಭಾಗವಹಿಸಿ ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿ ಪಾರಾಯಣ ನಡೆಸಲಾಯಿತು. ಬಳಿಕ ಶ್ರೀಮಠದ ಮುಂಭಾಗದಲ್ಲಿ ಬೆಳ್ಳಿ ರಥದಲ್ಲಿ ಶಂಕರಾಚಾರ್ಯರ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಲಾಯಿತು. ರಥದಲ್ಲಿ ಶಂಕರಾಚಾರ್ಯರ ಭಾವಚಿತ್ರ ವಿರಾಜಮಾನರಾಗುತ್ತಿದ್ದಂತೆ ನೆರೆದ ಭಕ್ತ ಸಮೂಹ ವೇದ ಪಾರಾಯಣ ನಡೆಸಿ ಭಕ್ತಿಯ ಸಿಂಚನ ಮೂಡಿಸಿದರು. ಬಳಿಕ ಭವ್ಯ ಮೆರವಣಿಗೆ ಆರಂಭವಾಯಿತು. ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ವಾದ್ಯ ವೈಭವದೊಂದಿಗೆ ಲಯನ್ಸ ಸ್ಕೋಲ್, ಕೆರೂಡಿ ಆಸ್ಪತ್ರೆ, ಎಸ್‌ಬಿಐ ಬ್ಯಾಂಕ್, ರಾಮಲಿಂಗೇಶ್ವರ ಬ್ಯಾಂಕ್ ರಸ್ತೆ ಮೂಲಕ ಶಂಕರಮಠದ ತಲುಪಿತು.

ನಂತರ ಶಂಕರ ಮಠದ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಶಂಕರಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದಾಪುರದ ಪಂ. ಸುಪ್ರತೀಕ ಭಟ್ಟ ಉಪನ್ಯಾಸ ನೀಡಿ, ಶಂಕರಾಚಾರ್ಯರರು ಭರತ ಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಎಂಟನೇ ಶತಮಾನದಲ್ಲಿ ನಾಲ್ಕು ಆಮನಾಯ ಪೀಠಗಳನ್ನು ಸ್ಥಾಪನೆ ಮಾಡಿ ಅಖಂಡ ಭಾರತವನ್ನು ಒಂದು ರೇಖೆಯಲ್ಲಿ ಜೋಡಿಸಿದ್ದರು. ಸನಾತನ ಧರ್ಮ ಪುನರುತ್ಥಾನಕ್ಕೆ ಕಾಲ್ನಡಿಗೆ ಮೂಲಕ ಸಂಚರಿಸಿ ಮಹತ್ತರ ಕೊಡುಗೆ ನೀಡಿದ್ದಾರೆ. ವೇದ, ಉಪನಿಷತ್ತು ಇಂದಿಗೂ ನಮಗೆ ಸಿಗುತ್ತಿದೆ ಎಂದರೇ ಅದಕ್ಕೆ ಅವರು ನೀಡಿದ ಕೊಡುಗೆ ಎಂದು ಬಣ್ಣಿಸಿದರು.

ಸೌಂದರ್ಯ ಲಹರಿ, ಶಿವಾನಂದ ಲಹರಿಗಳಂತಹ ಗ್ರಂಥ ರಚನೆ ಮಾಡಿದರು. ದೇವರಲ್ಲಿ ಬೇಧ ಭಾವ ಎಣಿಸಿರಲಿಲ್ಲ. ಸಾಗುವ ಹಾದಿ ಧಾರ್ಮಿಕವಾಗಿ ಇರಲಿ. ಭಗವಂತನ ಪೂಜೆ ಪರಿಶುದ್ಧ ಮನಸ್ಸಿನಿಂದ ಮಾಡಬೇಕು. ಪೂರ್ವ ಜನ್ಮದ ಪಾಪ ಕಳೆದು ಕೊಳ್ಳಲು ಮರುಜನ್ಮ ನೀಡಿದಕ್ಕೆ ಸೇವೆ ರೂಪದಲ್ಲಿ ಋಣ ತೀರಿಸುವ ಕೆಲಸವಾಗಬೇಕು ಅಂತ ಮಾರ್ಗದರ್ಶನ ಮಾಡಿದ್ದಾರೆ. ಭಜಗೋವಿಂದA ಭಜ ಗೋವಿಂದ ಪುನರಪಿ ಜನ್ಮಂ ಅಂತ ರಚನೆ ಮಾಡಿ ಆತ್ಮ ಶಕ್ತಿ ಅನಾವರಣಗೊಳಿಸಿದ್ದಾರೆ ಎಂದರು.

ಜಗತ್ತು ಮಾಯೆಯಿಂದ ಕೂಡಿದೆ, ಅದರಲ್ಲಿ ಬಂಽಯಾಗದೇ ಭಗವಂತನ ಸೇವೆ ಮಾಡಬೇಕು. ನಮ್ಮ ಕರ್ಮ ನಮಗೆ ಪ್ರತಿ-Àಲ. ಸಂಸಾರ ದಲ್ಲಿ ಮುಳುಗಿರುವ ದುಃಖಕ್ಕೆ ನಾವೇ ಕಾರಣರು. ಸಂಸಾರ ಜಂಜÁಟ ಹೊರಗುಬೇಡ, ಒಳಗು ಬೇಡ ನೀಲಕಂಠರಾಗಿ ಬದುಕಿ ಅಂತ ಹೇಳಿದ್ದಾರೆ. ಸನಾತನ ಧರ್ಮ, ಪರಂಪರೆ ಉಳುವಿಗಾಗಿ ಶಂಕರಾಚಾರ್ಯರ ಮಾಗದರ್ಶನ ಇಂದಿಗೂ ಸ್ಮರಣೀಯ. ನಾವೆಲ್ಲ ಸನ್ಮಾರ್ಗದಲ್ಲಿ ಬದುಕಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಅಧ್ಯಕ್ಷತೆ ವಹಿಸಿದ್ದರು. ಶಿವರಾಮ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗಿರೀಶ ಮಾಸೂಕರ, ಡಾ.ಆರ್.ವಿ.ಜೋಶಿ, ಕಿರಣ ಬಾಗಲಕೋಟೆ, ಸಂಜೀವ ಪಾಟೀಲ, ಜಿ.ಎನ್.ಕುಲಕರ್ಣಿ, ವಿ.ವೈ.ಕವಠೇಕರ, ದಿಲೀಪ ಖಜಿನದಾರ, ವಸಂತ ಕುಲಕರ್ಣಿ, ಭೀವಣ್ಣ ದಪ್ತರದಾರ ಇತರರು ಇದ್ದರು. ಶಾರದಾ ಮಹಿಳಾ ಮಂಡಳ ಸದಸ್ಯರು ಪ್ರಾರ್ಥಿಸಿದರು. ವಿನೋದ ಪುರಾಣಿಕ ಪ್ರಾರ್ಥಿಸಿದರು. ಉಮಾರಾಮ ಜೇರೆ ವಂದಿಸಿದರು.