ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಜೆ ಸಂಕೀರ್ತನಾ ಯಾತ್ರೆ ಜರುಗಿತು. 
ಜಿಲ್ಲೆ

ಕೋಟೆನಗರಿಯಲ್ಲಿ ಭವ್ಯ ಸಂಕೀರ್ತನಾಯಾತ್ರೆ

ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಕಳಸ ಹಾಗೂ ಮಂತ್ರಾಕ್ಷತೆಯ ಭವ್ಯ ಸಂಕೀರ್ತನಾ ಯಾತ್ರೆ ಕೋಟೆನಗರಿಯಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.

ಸಂಕೀರ್ತನಾ ಯಾತ್ರೆ ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ಮಹೇಶ್ವರಿ ಮಂಗಲ ಭವನ, ಚರಂತಿಮಠ, ಹುಂಡೇಕಾರ ಗಲ್ಲಿ, ಟೀಕಿನಮಠ, ಕಿಣಗಿ ಕ್ರಾಸ್ , ಶಾರದಾ ಪ್ರೆಸ್, ಹಳಪೇಟ ಮಡು, ಗಜಾನನ ಚೌಕ ಮೂಲಕ ಕಿಲ್ಲಾದಲ್ಲಿರುವ ಕೊತ್ತಲೇಶ ದೇವಸ್ಥಾನಕ್ಕೆ ಸಮಾಪ್ತಿಯಾಗಿ ಸಭೆಯಾಗಿ ಮಾರ್ಪಟ್ಟಿತು. ಸಂಕೀರ್ತನಾ ಯಾತ್ರೆಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಜೈ ಶ್ರೀರಾಮ, ಅಯೋಧ್ಯ ಪತಿ ಶ್ರೀರಾಮ ಚಂದ್ರಕಿ ಜೈ ಘೋಷಣೆಗಳು ಮೊಳಗಿದವು.

ಈ ಸಂದರ್ಭದಲ್ಲಿ ಮಳೆಯಪ್ಪಜ್ಜನವರ ಮಠ ಜಗನ್ನಾಥ ಸ್ವಾಮೀಜಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಶೇಖರ ಮಾನೆ, ಸತ್ಯನಾರಾಯಣ ಹೇಮಾದ್ರಿ, ಕುಮಾರಸ್ವಾಮಿ ಹಿರೇಮಠ, ಶಿವಾನಂದ ಟವಳಿ, ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಕಿರಣ ಪವಾಡಿಶೆಟ್ಟರ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗಂಗಾಧರ ಮುರನಾಳ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವು ಮೇಲ್ನಾಡ ಇತರರು ಇದ್ದರು.