ಬಾಗಲಕೋಟೆ: ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಾಸಕ ವೀರಣ್ಣ ಚರಂತಿಮಠರಿಂದ ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದು, ಶನಿವಾರ ಬಾಗಲಕೋಟೆ ನಗರದ ಭಕ್ತಾದಿಗಳು ಆರಾಧ್ಯ ದೈವ ಮೋಟಗಿ ಬಸವೇಶ್ವರ ದೇವಸ್ಥಾನದ ದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಮಾಡಿದರು.
ನಗರದ ೫ ಮತ್ತು ೯ ನೇ ವಾರ್ಡ್ಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ಸಂಪರ್ಕಿಸಿ ಅಭಿವೃದ್ಧಿ ಪರ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದ ಮನವಿ ಮಾಡಿಕೊಂಡರು. ನಾಡಿನ ಸೇವೆಗೆ ಸಮರ್ಪಿತವಾಗಿರುವ ಬಿಜೆಪಿ ಪಕ್ಷಕ್ಕೆ ಜನರು ಸಂಪೂರ್ಣ ಬಹುಮತದೊಂದಿಗೆ ಆಶೀರ್ವಾದ ಮಾಡುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಿಸುವ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ನಾರಾಯಣಸಾ ಭಾಂಡಗೆ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ, ಲಕ್ಷ್ಮೀನಾರಾಯಣ ಕಾಸಟ, ಸತ್ಯನಾರಾಯಣ ಹೇಮಾದ್ರಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಶರಣಪ್ಪ ಗುಳೇದ, ಪ್ರಭುಸ್ವಾಮಿ ಸರಗಣಾಚಾರಿ, ಶರಣಪ್ಪ ಕೆರೂರ, ಶಿವಾನಂದ ಟವಳಿ, ಪ್ರೇಮಾ ಅಂಬಿಗೇರ ಇತರರು ಇದ್ದರು.