ಬಾಗಲಕೋಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾನಾ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದವು. ಜಿಲ್ಲಾಡಳಿತ ಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕಾ ಕಚೇರಿ ಎದುರು ಬುಧವಾರ ಹೋರಾಟ ನಡೆದವು. ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಔಷಽ ಮಾರಾಟಗಾರರ ಹೋರಾಟ
ಔಷಽ ಮಾರಾಟ ಪ್ರತಿನಿಽಗಳ ಜಿಲ್ಲಾ ಘಟಕ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರಿಗೆ ಮನವಿ ಸಲ್ಲಿಸಿದರು. ೪ ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು, ಎಸ್‌ಪಿ ಈ ಕಾಯ್ದೆ (೧೯೭೬) ಅನ್ನು ರಕ್ಷಿಸ ಬೇಕು, ಮಾರಾಟ ಪ್ರತಿನಿಽ ನೌಕರರಿಗೆ ಶಾಸನಬದ್ಧ ಕೆಲಸದ ನಿಯಮಾವಳಿಗಳನ್ನು ರೂಪಿಸಬೇಕು, ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತು ಸಂಸ್ಥೆಗಳಲ್ಲಿ ವೈದ್ಯಕೀಯ ಪ್ರತಿನಿಽಗಳ ಪ್ರವೇಶದ ಮೇಲೆ ಹೇರಿರುವ ನಿರ್ಬಂಧನೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೆಲಸ ನಿರ್ವಹಿಸುವ ಹಕ್ಕನ್ನು ಸಮರ್ಥಿಸಬೇಕು, ಔಷಽಗಳನ್ನು ಒಳಗೊಂಡು ಅಗತ್ಯ ವಸ್ತುಗಳ ಮೇಲಿನ ಬೆಲೆಗಳನ್ನು ನಿಯಂತ್ರಿಸಬೇಕು ಮತ್ತು ಜೀವರಕ್ಷಕ ಔಷÀಽಗಳ ಮೇಲಿನ ಜಿಎಸ್‌ಟಿ ತೆಗೆದು ಹಾಕಬೇಕು, ಔಷÀಧ ತಯಾರಿಕೆಯಲ್ಲಿ ದೇಶವು ಸ್ವಾವಲಂಬನೆಯನ್ನು ಸಾಽಸಲು ಖಾಸಗೀಕರಣ ನಿಲ್ಲಿಸುವುದು, ಅಲ್ಲದೆ ಸಾರ್ವಜನಿಕ ಔಷÀಧ ತಯಾರಿಕಾ ಸಂಸ್ಥೆಗಳನ್ನು ಜೀರ್ಣೋದ್ಧಾರ ಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ವಿನಾಯಕ ದೇಸಾಯಿ, ಜಿಲ್ಲಾ ಅಧ್ಯಕ್ಷ ಪ್ರಸನ್ನ ಮಿರ್ಜಿ, ಕಾರ್ಯದರ್ಶಿ ಸುರೇಶ್ ಹಳ್ಳಿ, ಸಹ ಕಾರ್ಯದರ್ಶಿ ಸತೀಶ್ ಮುಷ್ಠೀಗೇರಿ, ಸಂಗಮೇಶ್ ಅಬ್ದುಲ್‌ಪುರ, ಅರವಿಂದ ಸುಲಾಖೆ, ಶ್ರೀಕಾಂತ್ ಪಾಟೀಲ, ರಾಘವೇಂದ್ರ ಗುಮಾಸ್ತೆ, ಶ್ರೀಕಾಂತ ದಳವಾಯಿ, ನವೀನ್ ಹುಂಡೇಕಾರ ಇತರರು ಇದ್ದರು.
ಅನುದಾನ ಹೆಚ್ಚಿಸಲು ಆಗ್ರಹ
ಬಾಗಲಕೋಟೆ: ಅಖಿಲ ಭಾರತ ಸಾರ್ವತ್ರಿಕ ಮುಷÀ್ಕರದಲ್ಲಿ ಬಿಸಿಯೂಟ ನೌಕರರರು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.
ಎಂಡಿಎA ಯೋಜನೆಗೆ ಅನುದಾನ ಹೆಚ್ಚಿಸಬೇಕು, ಬಿಸಿಯೂಟ ನೌಕರರಿಗೆ ೨೬ ಸಾವಿರ ರೂ. ಕನಿಷ್ಠ ವೇತನ ಹಾಗೂ ಮಾಸಿಕ ಪಿಂಚಣಿ ೧೦ ಸಾವಿರ ಕೊಡಬೇಕು, ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿ ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸ್ಸಾಗಬೇಕು, ಸಾದಿಲ್ವಾರು ಖಾತೆ ಮೊದಲಿ ನಂತೆಯೇ ಬದಲಾಯಿಸಬೇಕು, ಅಡುಗೆ ಕೇಂದ್ರಗಳು ಸುಸಜ್ಜಿತವಾಗಿ ಇಲ್ಲದ ಕಡೆ ಉತ್ತಮ ಅಡುಗೆ ಕೇಂದ್ರಗಳನ್ನು ನಿರ್ಮಿಸಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ ರಾಜ್ಯದ ಮಾನ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವಷÀðದ ೧೨ ತಿಂಗಳು ಕೆಲಸ ಮತ್ತು ಕನಿಷÀ್ಠ ಕೂಲಿ ಜಾರಿ ಆಗಬೇಕು ಎಂದು ಆಗ್ರಹಿಸಿದರು.
ರೇಖಾ ಮ್ಯಾಗೇರಿ, ಎ.ಯು.ಅರ್ಕಸಾಲಿ, ರುಕ್ಷಿ÷್ಮಣಿ ಸಿ, ರೇಣುಕಾ ಪಿ. ಸುಜಾತ ಎಂ ಇತರರು ಇದ್ದರು.
ಹೆಚ್ಚುವರಿ ಪ್ರೋಡಕ್ಷಣಗೆ ಅವಕಾಶ ನೀಡಬೇಡಿ
ಬಾಗಲಕೋಟೆ: ಜೆ.ಕೆ.ಸಿಮೆಂಟ್ ಕಾರ್ಖಾನೆಗೆ ಹೆಚ್ಚುವರಿ ಪ್ರೋಡಕ್ಷನ ಅಳವಡಿಸಲು ಅವಕಾಶ ನೀಡಬಾರದು ಎಂದು ಮುಧೋಳ ತಾಲೂಕಿನ ಬೊಮ್ಮನಬುದ್ದಿ ಹಾಗೂ ನಿಂಗಾಪೂರ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.
ಬೊಮ್ಮನ ಬುದ್ದಿ, ನಿಂಗಾಪುರ ಗ್ರಾಮಗಳ ತೀರಾ ಹತ್ತಿರದಲ್ಲಿ ಅಂದಾಜು ೧೫ ವಷÀðಗಳಿಂದ ಜೆಕೆ ಸಿಮೆಂಟ್ ಕಾರ್ಖಾನೆಯು ಅಂದಾಜು ೨೦೦ ಎಕರೆ ಗಳಷÀÄ್ಟ ಭೂಮಿ ಆವರಿಸಿಕೊಂಡು ಇಲ್ಲಿಯವರಿಗೆ ತನ್ನ ಸಿಮೆಂಟ್ ವ್ಯವಹಾರ ನಡೆಸಿಕೊಂಡು ಬಂದಿರುತ್ತದೆ. ಈ ಕಾರ್ಖಾನೆಯು ಪ್ರಾರಂಭದಿAದ ಹಿಡಿದು ಇಲ್ಲಿಯವರೆಗೆ ಸಾರ್ವಜನಿಕರಿಗೆ, ರೈತರಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಧೂಳು ಆವರಿಸಿ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಬೆಳೆ ಹಾನಿಗೆ ಬಿಡಿಗಾಸು ನೀಡಿಲ್ಲ ಎಂದು ದೂರಿದರು.
ಕಾರ್ಖಾನೆಯಿಂದ ಹರಡುವ ಧೂಳಿನಿಂದ ಜನರು ಮತ್ತು ಜಾನುವಾರುಗಳು ಆರೋಗ್ಯದಲ್ಲಿ ಹದಗೆಟ್ಟು ತೊಂದರೆಯಾಗುತ್ತಲೆ ಬಂದಿದೆ. ಈ ಧೂಳಿನಿಂದ ಜನ-ಜಾನುವಾರಗಳ ಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೂ ಜನರ ಸಮಸ್ಯೆ ಆಲಿಸಲು ಮತ್ತು ಸ್ಪಂದಿಸಲು ಯಾವ ರಾಜಕೀಯ ಜನಪ್ರತಿನಿಽಗಳಾಗಲಿ ಸ್ಥಳೀಯ ನಾಯಕರಾಗಲಿ ಸಂಬAಧಪಟ್ಟ ಅಽಕಾರಿಗಳಾಗಲಿ ಯಾರು ಬಂದಿರುವುದಿಲ್ಲ. ಸಿಮೆಂಟ್ ತಯಾರಿಕೆಯ ಹೆಚ್ಚುವರಿ ಪ್ರೊಡಕ್ಷನ್ ಅಳವಡಿಸಲು ಜು. ೩ ರಂದು ಕಾರ್ಖಾನೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸಭೆ ನಡೆಸಿರುತ್ತಾರೆ. ಆದರೇ ಸಭೆಯಲ್ಲಿ ಗ್ರಾಮಸ್ಥರಿಗೆ ಆಹ್ವಾನ ಇರಲಿಲ್ಲ. ಸ್ಥಳೀಯ ಸಾರ್ವಜನಿಕರು ಭಾಗಿಯಾಗಿರುವುದಿಲ್ಲ. ಹೀಗಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಐಸಿಡಿಎಸ್ ಖಾಯಂಗೊಳಿಸಿ
ಬಾಗಲಕೋಟೆÀ: ಐಸಿಡಿಎಸ್ ಅಡಿಯಲ್ಲಿ ಅಂಗನವಾಡಿ ನೌಕರÀರು ೫೦ ವಷÀðಗಳಿಂದ ದುಡಿಯುತ್ತಿದ್ದು, ಸಾಮಾಜಿಕ ನ್ಯಾಯದ ಅಡಿ ಈ ಯೋಜನೆ ಖಾಯಂ ಮಾಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರು ಶಿಶು ಅಭಿವೃದ್ಧಿ ಯೋಜನಾಽಕಾರಿಗಳಿಗೆ ಮನವಿ ಸಲ್ಲಿಸಿದರು.
ದೇಶದ ಕಾರ್ಪೊರೇಟ್ ಬಂಡವಾಳಗಾರರಿಗೆ ೧೫.೩೨ ಲಕ್ಷ ಕೋಟಿ ಸಾಲ ಮನ್ನಾ, ೧.೯೭ ಲಕ್ಷ ಕೋಟಿ ರೂ.ಸಬ್ಸಿಡಿಗಳನ್ನು ಉದಾರವಾಗಿ ಕೇಂದ್ರ ನೀಡುತ್ತಿದೆ. ದೇಶದ ಭವಿಷÀ್ಯ ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗಳಿಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಕೊಡುತ್ತಿರುವ ತಮ್ಮ ಪಾಲಿನ ವಂತಿಗೆಯ ಹಣವನ್ನು ಕಡಿತ ಗೊಳಿಸಲು ಪೋಷÀಣೆ ಟ್ರ‍್ಯಾಕರ್‌ನಲ್ಲಿ ಫಲಾನುಭವಿಗಳಿಗೆ ಮನೆಗೆ ಪಡಿತರ ಸಾಮಾಗ್ರಿಗಳನ್ನು ನೀಡಲು ೨೦೨೫ ಮೇ ತಿಂಗಳಿನಿAದ ಕಡ್ಡಾಯಗೊಳಿಸಿದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಸೌಲಭ್ಯ ತೆಗೆದು ಕೊಳ್ಳಲು ಆಧಾರ್ ಕಡ್ಡಾಯವಲ್ಲ ಸುರ್ಪ್ರಿಂ ಕೋರ್ಟ್ ೨೦೧೫ ರಲ್ಲಿ ನಿರ್ದೇಶನ ನೀಡಿದೆ. ೨೦೧೩ ರ ಆಹಾರ ಭದ್ರತಾ ಕಾಯ್ದೆಯೂ ಇದನ್ನು ಪ್ರತಿಪಾದಿಸಿದೆ. ಇದೆಲ್ಲ ನಿರ್ದೇಶನವಿದ್ದರು ಸಹ ಅಂಗನವಾಗಿ ನೌಕರರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಲಾಗುತ್ತಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.