ಬಾಗಲಕೋಟೆ: ಭ್ರಷ್ಟಾಚಾರ, ದಲಿತರ ಹಣ ಲೂಟಿ, ಮುಸ್ಮಿಂ ಓಲೈಕೆ ಮಾಡುತ್ತಿದೆ ಹಾಗೂ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಕೋಟೆನಗರಿಯಲ್ಲಿ ಗುರುವಾರ ಭಾರಿ ಬೆಂಬಲ ವ್ಯಕ್ತವಾಯಿತು. ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು.
ಇಲ್ಲಿನ ಅಂಬೇಡ್ಕರ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಎತ್ತಿನ ಬಂಡಿ ಹಾಗ ತೆರೆದ ವಾಹನ ರಾಜ್ಯಾದ್ಯಕ್ಷ ಬಿ.ವೈ.ವಿಜೇಂದ್ರ ಸೇರಿದಂತೆ ರಾಜ್ಯ, ಜಿಲ್ಲೆಯ ನಾಯಕರು ಏರುತ್ತಿದ್ದಂತೆ ಕಾರ್ಯಕರ್ತ ಶಿಳ್ಳೆ, ಚಪ್ಪಾಳೆ, ಕೇಕೇ ಮುಗಿಲು ಮುಟ್ಟಿದವು. ಜೈ ಬಿಜೆಪಿ, ಜೈ ವಿಜೇಂದ್ರ ಸೇರಿದಂತೆ ನಾನಾ ಘೋಷಣೆಗಳು ಮೊಳಗಿದವು.
ಅಂಬೇಡ್ಕರ ವೃತ್ತದಿಂದ ಆರಂಭವಾದ ಜನಾಕ್ರೋಶ ಯಾತ್ರೆ ಕೃಷ್ಣಾ ಚಿತ್ರ ಮಂದಿರ, ವೆಂಕಟಪೇಟ, ವಲ್ಲಭಬಾಯಿ ಚೌಕ್, ಎಂ.ಜಿ.ರಸ್ತೆ, ಬಸವೇಶ್ವರಕ್ಕೆ ತಲುಪಿತು. ಬಸವೇಶ್ವರ ಪುತ್ಥಳಿಗೆ ಪುಷ್ಪ ವೃಷ್ಠಿ ಅರ್ಪಿಸಲಾಯಿತು. ಬಳಿಕ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತ್ತು. ನೆತ್ತಿಯ ಮೇಲೆ ಉರುಬಿಸಿಲು ಲೆಕ್ಕಿಸದೇ ಕಾರ್ಯಕರ್ತರು ಹುರುಪು, ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ಮೆರವಣಿಗೆ ಮಾರ್ಗದಲ್ಲಿ ವಿಜೇಂದ್ರ ಅವರಿಗೆ ಹೂವಿ ಹಾರ ಹಾಕಿ ಭವ್ಯ ಸ್ವಾಗತ ಕೋರಲಾಯಿತು.
ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸಚೇತಕ ಎನ್.ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಂಸದರಾದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ರಾಜ್ಯ ಸಭೆ ಸದಸ್ಯ ನಾರಾಣಸಾ ಭಾಂಡಗೆ, ಶಾಸಕರಾದ ಜಗದೀಶ ಗುಡಗುಂಟಿ, ಹರೀಶ ಪುಂಜ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಬಿ.ಶ್ರೀರಾಮಲು, ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ. ಪಿ.ರಾಜೀವ್, ಹರತಾಳ ಹಾಲಪ್ಪ, ಜಿ.ಎಸ್.ನ್ಯಾಮಗೌಡ, ದೊಡ್ಡನಗೌಡ ಪಾಟೀಲ, ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮೂಗನೂರಮಠ, ಬಸವರಾಜ ಅವರಾದಿ, ಬಸವರಾಜ ಯಂಕ0ಚಿ, ವಿಜಯಲಕ್ಷಿ÷್ಮÃ ತುಂಗಳ, ಶಶಿಕಲಾ ಮಜ್ಜಗಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.