ಬಾಗಲಕೋಟೆ ನಗರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಅವರು ಡಾ.ವೀರಣ್ಣ ಚರಂತಿಮಠ ಅವರ ಪರ ನಗರದಲ್ಲಿ ರೋಡಶೋ ನಡೆಸಿದರು.  
ಜಿಲ್ಲೆ

ಕೋಟೆನಗರಿಯಲ್ಲಿ ಕಿಚ್ಚ ಸುದೀಪ್ ರೋಡ್ ಶೋ..

ಬಾಗಲಕೋಟೆ: ಬಿಜೆಪಿ ಪರ ಕ್ಯಾಂಪಿಯನ್ ನಡೆಸುತ್ತಿರುವ ಸ್ಯಾಂಡಲವುಡ್ ಸ್ಟಾರ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಪರ ಅಬ್ಬರದ ಪ್ರಚಾರ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ರೋಡ ಶೋ ನಡೆಸಿ ಮತಯಾಚನೆ ನಾಡಿದರು.

ನಗರದ ಬಿವಿವಿ ಸಂಘದ ಆವರಣಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರನ್ನು ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ಸ್ವಾಗತಿಸಿಕೊಂಡರು. ನಟ ಸುದೀಪ ಅವರು ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರೊಂದಿಗೆ ತೆರೆದ ವಾಹನ ಏರುತ್ತಿದ್ದಂತೆ ಕಿಕ್ಕೀರಿದು ಸೇರಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು.

ನಂತರ ಶ್ರೀ ಬೀಳೂರು ಗುರುಬಸವ ಸ್ವಾಮೀಜಿ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ರ‍್ಯಾಲಿಯು ನಗರದ ಟೀಕಿನಮಠ, ಅಡತ ಬಜಾರ, ಪೊಲೀಸ್ ಚೌಕ್, ಮಹಾತ್ಮಾಗಾಂಽ ರಸ್ತೆ ಮೂಲಕ ತೆರೆದ ವಾಹನದ ಮೂಲಕ ನಗರದ ಹೃದಯ ಭಾಗ ಬಸವೇಶ್ವರ ಸರ್ಕಲ್‌ಗೆ ತಲುಪಿ ರೋಡ ಶೋ ಸಮಾಪ್ತಿಗೊಂಡಿತು. ಈ ವೇಳೆ ಬಿಜೆಪಿ ಜಯವಾಗಲಿ..ಡಾ.ವೀರಣ್ಣ ಚರಂತಿಮಠ ಎಂಎಲ್‌ಎ ಆಗಲಿ… ಕಿಚ್ಚ ಸುದೀಪ್‌ಗೆ ಜಯವಾಗಲಿ ಎಂಬ ಜಯಘೋಷಗಳು ಪ್ರತಿಧ್ವನಿಸಿದವು.

ಈ ಸಂದರ್ಭದಲ್ಲಿ ಬಾಗಲಕೋಟೆ ಕ್ಷೇತ್ರ ಉಸ್ತುವಾರಿ, ಬಿಹಾರ ಶಾಸಕ ಸಂಜಯಕುಮಾರ ಸಿಂಗ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮುದೇನೂರ, ರಾಜು ನಾಯ್ಕರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ನಗರ ಮಂಡಳ ಅಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ಸುರೇಶ ಕೊಣ್ಣೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ ಸೇರಿದಂತೆ ಇತರರು ಇದ್ದರು.