ಬಾಗಲಕೋಟೆ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಬೈಕ್ ರ‍್ಯಾಲಿ ನಡೆಯಿತು.
ನಗರದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಆರಂಭಗೊಂಡ ಯಾತ್ರೆಗೆ ಎಐಸಿಸಿ ಬಾಗಲಕೋಟೆ ಲೋಕಸಭಾ ಉಸ್ತುವಾರಿ ಕ್ರೀಸ್ಟೋಫರ್, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ ಚಾಲನೆ ನೀಡಿದರು.
ನೂರಾರು ಕಾರ್ಯಕರ್ತರು ಬೈಕ್ ಮೂಲಕ ಶಕ್ತಿ ಚಿತ್ರ ಮಂದಿರ, ತರಕಾರಿ ಮಾರುಕಟ್ಟೆ, ಹಳೇ ಪೋಸ್ಟ, ಪಂಕಾ ಮಸೀದಿ, ವಲ್ಲಭಾಯಿ ಚೌಕ್, ಅಡತ್ ಬಜಾರ್, ಬಸವೇಶ್ವರ ವೃತ್ತ, ಕಾಲೇಜು ರಸ್ತೆ, ರೈಲ್ವೆ ನಿಲ್ದಾಣ, ಎಪಿಎಂಸಿ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಇಂಜಿನಿಯರಿಂಗ್ ಕಾಲೇಜು ವೃತ್ತ ಸೇರಿದಂತೆ ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಈ ವೇಳೆ ಕಾಂಗ್ರೆಸ್ ಪರ ಜಯ ಘೋಷಣೆ ಕೂಗುತ್ತಾ ಪ್ರಜಾ ಧ್ವನಿ ಯಾತ್ರೆ ಜಾಗೃತಿ ಮೂಡಿಸಿದರು. ಯಾತ್ರೆ ಹಿನ್ನಲೆಯಲ್ಲಿ ಕೋಟೆನಗರಿ ಕಾಂಗ್ರೆಸ್ ಮಯಗೊಂಡಿದೆ. ಪ್ರಮುಖ ಬೀದಿ, ರಸ್ತೆ, ವೃತ್ತಗಳಲ್ಲಿ ಕಟೌಟ್ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಬಸವಪ್ರಭು ಸರನಾಡಗೌಡ, ಮುಖಂಡರಾದ ಮುತ್ತು ಜೋಳದ, ಉಮೇಶ ಮೇಟಿ, ಮಲ್ಲಿಕಾರ್ಜುನ ಮೇಟಿ, ಹಾಜಿಸಾಬ ದಂಡಿನ, ರೇಣುಕಾ ನ್ಯಾಮಗೌಡರ ಸೇರಿದಂತೆ ಇತರರು ಇದ್ದರು