ಬಾಗಲಕೋಟೆ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗೆಲವು ಸಾಽಸಿದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಗುರುವಾರ ಸಂಭ್ರಮಾಚರಣೆ ನಡೆಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಭವ್ಯ ಇತಿಹಾಸ ಹೊಂದಿದೆ. ಆಂತರಿಕವಾಗಿ ಪ್ರಜಾಪ್ರಭುತ್ವ ಹೊಂದಿದ ಪಕ್ಷ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಳ ಹಂತದಿಂದ ಬಂದವರು. ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮತದಾರರು ಆಯ್ಕೆ ಮಾಡಿದ್ದು ಉತ್ತಮ ನಿರ್ಧಾರ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಿಗೆ ಇದೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಆರಂಭಿಸಿ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ರಾಷ್ಟ್ರ, ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬರಲಿದೆ ಎಂದು ಹೇಳಿದರು.
ಮುಖಂಡ ಆನಂದ ಜಿಗಜಿನ್ನಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕಾಯಕ ಎಂದಿಗೂ ಬಿಟ್ಟಿಲ್ಲ. ಮಲ್ಲಿಕಾರ್ಜುನ ಖರ್ಗೆ ಅಂತಹ ಮಹಾನ್ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ದೇಶ ಹಾಗೂ ರಾಜ್ಯದಲ್ಲಿ ಜನರು ಕಾಂಗ್ರೆಸ್ ಅಽಕಾರಕ್ಕೆ ಬಯಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ. ಕನ್ನಗಡಿಗರಿಗೆ ಇದರ ಅವಕಾಶ ಸಿಕ್ಕಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ಮಹಾರಾಜನವರ, ಸಿಕಂದರ ಅಥಣಿ, ಪ್ರೇಮನಾಥ ಗರಸಂಗಿ, ಹನುಮಂತ ರಾಕುಂಪಿ, ಶಫಿಕ ದೊಡ್ಡಕಟ್ಟಿ, ಅಮೀನಸಾಬ ರಕ್ಕಸಗಿ, ಹಾಜಿಸಾಬ ದಂಡಿನ, ರೇಣುಕಾ ನ್ಯಾಮೌಡ, ಮಂಜುಳಾ ಭೂಸಾರೆ, ಉಮೇಶ ಮೇಟಿ, ಸದಾಶಿವ ಕೊಡಬಾಗಿ, ಮುತ್ತು ಜೋಳದ ಇದ್ದರು.