ಬಾಗಲಕೋಟೆ ನಗರದ ಇಂಜಿನಿಯರಿ0ಗ್ ಕಾಲೇಜು ರಸ್ತೆಯಲ್ಲಿ ಗಾರ್ನಿಯರ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಹೇರ ಕಲರಿಂಗ ಅಭಿಯಾನದ ವಾಹನ. 
ಜಿಲ್ಲೆ

ಕೋಟೆನಗರಿಯಲ್ಲಿ ಉತ್ತಮ ಸ್ಪಂದನೆ

ಬಾಗಲಕೋಟೆ: ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ ಸಂಸ್ಥೆ ವತಿಯಿಂದ ಗ್ರಾಹಕರಿಗೆ ಉಚಿತ ಹೇರ ಕಲರಿಂಗ್ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಿದ್ದು, ಭಾನುವಾರ ಕೋಟೆನಗರಿಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.

ದೇಶದ ಖ್ಯಾತ ಹೇರ ಕಲರಿಂಗ ಸಂಸ್ಥೆಯಾದ ಗಾರ್ನಿಯರ ಈ ಅಭಿಯಾನಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದು. ಸಂಸ್ಥೆಯ ನುರಿತ ಹೇರ ಕಲರಿಂಗ ಪರಿಣಿತರು ಗ್ರಾಹಕರಿಗೆ ಉಚಿತವಾಗಿ ಕಲರಿಂಗ ಮಾಡುತ್ತಿz್ದÁರೆ. ಮಹಿಳೆಯರಿಗೂ ಕೂಡ ಪರಿಣಿತ ತಂಡದ ಮಹಿಳೆ ಸದಸ್ಯರೇ ಕಲರಿಂಗ ಮಾಡುತ್ತಿರುವುದು ವಿಶೇಷ. ಬಾಗಲಕೋಟೆಯಲ್ಲಿ ಮೊದಲದಿನ ಭಾರಿ ಸ್ಪಂದನೆ ವ್ಯಕ್ತವಾಯಿತು. ಸರದಿಯಲ್ಲಿ ನಿಂತಿ ಗ್ರಾಹಕರು ಹೇರ ಕಲರಿಂಗ್ ಮಾಡಿಸಿಕೊಂಡರು. ೫೦ ಕ್ಕೂ ಹೆಚ್ಚು ಜನ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಎರಡನೇ ದಿನ ಜೂ.೯ ರಂದು ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿರುವ ಬಿವಿಬಿ ಇಂಜಿನಿಯರಿAಗ್ ಕಾಲೇಜ್-ಕಾಳಿದಾಸ ವೃತ್ತದ ರಸ್ತೆಯಲ್ಲಿ ಬೆಳಗ್ಗೆ ೧೦ ಗಂಟೆಯಿAದ ಉಚಿತ ಹೇರ ಕಲರಿಂಗ ಅಭಿಯಾನ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.೮೯೦೪೨೩೧೨೪೮ ಸಂಪರ್ಕಿಸಬಹುದು.