ಜಾತ್ರೆ ಅಂಗವಾಗಿ ಬಾಗಲಕೋಟೆ ನಗರದ ಗ್ರಾಮ ದೇವತೆ ದ್ಯಾಮವ್ವ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು.  
ಜಿಲ್ಲೆ

ಕೋಟೆನಗರಿ ಗ್ರಾಮ ದೇವತೆ ಜಾತ್ರೆ ಸಂಪನ್ನ

ಬಾಗಲಕೋಟೆ: ಮುಳಗಡೆ ನಗರಿ ಬಾಗಲಕೋಟೆಯ ಗ್ರಾಮ ದೇವತೆ ಜಾತ್ರೆ ಮಂಗಳವಾರ ಗ್ರಾಮ ದೇವತೆ ದ್ಯಾಮವ್ವ ದೇವಿಗೆ ಉಡಿ ತುಂಬುವ ಮೂಲಕ ಸಂಪನ್ನಗೊAಡಿತು. ಕಳೆದ ಮೂರು ದಶಕಗಳ ಬಳಿಕ ಎರಡನೇ ಸಾರಿ ನಡೆದ ಜಾತ್ರೆ ಕೋಟೆನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.

ಮಂಗಳವಾರÀ ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮ ದೇವತೆ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಬೆಳಗ್ಗೆ ೬ ಗಂಟೆಯಿAದಲೇ ದರ್ಶನಕ್ಕೆ ಸರತಿಯಲ್ಲಿ ಜನ ನಿಂತಿದ್ದರು. ವಲ್ಲಭಭಾಯಿ ಚೌಕ್‌ನಿಂದ ಶುರುವಾದ ಸರತಿ, ಪಂಕಾಮಸೀದಿ, ಕಿ¯್ಲÁದ ಮೂಲಕ ಗ್ರಾಮ ದೇವಿಯ ದೇವಸ್ಥಾನದ ವರೆಗೆ ಸಾಲುಗಟ್ಟಿ ನಿಂತಿದ್ದರು. ಮಕ್ಕಳು, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಗ್ಗೆ ಚಳಿ ಹಾಗೂ ಮಧ್ಯಾಹ್ನ ಬಿಸಿಲನ್ನು ಲೆಕ್ಕಿಸದೆ ಒಂದು ಕಿ.ಮೀ. ವರೆಗೂ ಸರತಿ ಇರುವುದು ಕಂಡು ಬಂದಿತು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾಗಿರುವ ಬಾಗಲಕೋಟೆಯಲ್ಲಿ ಕಳೆದ ಮೂರೂವರೆ ದಶಕದಿಂದ ದೇವಿ ಜಾತ್ರೆ ನಡೆದಿರಲಿಲ್ಲ. ೨೦೨೧ ರಲ್ಲಿ ಜಾತ್ರೆ ಆರಂಭಗೊAಡಿತ್ತು, ಮೂರು ವರ್ಷಗಳ ಬಳಿಕ ನಡೆದ ಜಾತ್ರೆ ಹೊಸ ಹುರುಪು, ಹುಮ್ಮಸ್ಸು ತುಂಬಿತ್ತು. ಬಾಗಲಕೋಟೆ ನಗರ ಅಕ್ಷರಶಃ ಮಧುವನಗಿತ್ತಿಯತೆ ಶೃಂಗಾರಗೊAಡಿತ್ತು. ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ದೇಸಿ ಪರಂಪರೆ ಸಾಕ್ಷಿಕರಿಸಿತು. ಬಾಗಲಕೋಟೆ ನಗರದ ಮುಖಂಡರು ಜಾತಿ, ಪಕ್ಷ ಮತ, ಭೇದ ಮರೆತು ಜಾತ್ರೆಯನ್ನು ಐದು ದಿನ ವೈಭವದಿಂದ ಆಚರಿಸಿದರು. ಪಾಕೃತಿಕ ವಿಕೋಪದ ಸಂಕಷ್ಟ ನಿವಾರಣೆ ಮಾಡಲು ಪ್ರಾರ್ಥಿಸಿದರು. ಟೆಂಗಿನ ಕಾಯಿ, ನೈವೇದ್ಯ ಮಾಡಿ ಭಕ್ತರು ಹರಿಕೆ ತೀರಿಸಿದರು.

ಜನಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಐದು ದಿನಗಳಿಂದ ಪ್ರತಿನಿತ್ಯ ದೇವಿಗೆ ವಿಶೇಷ ಪೂಜೆ, ಹೋಮ, ಪಂಡಿತರ ಸಮ್ಮುಖದಲ್ಲಿ ವೇದ-ಮಂತ್ರಗಳ ಪಠಣ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ಶಾಸೊöÃಕ್ತವಾಗಿ ಜರುಗಿದವು. ನಿತ್ಯ ಸಂಜೆಯಿAದ ರಾತ್ರಿವರೆಗೆ ನಡೆದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ಜಾನಪದ ಜಾತ್ರೆ, ಕೊನೆ ನಮಸ್ಕಾರ ಹಾಸ್ಯ ಭರಿತ ನಾಟಕ, ನಗೆ ಹಬ್ಬ, ನೃತ್ಯೋತ್ಸವ, ಸಂಗೀತ ಸಂಭ್ರಮ, ಅಖಂಡ ಭಜನೆ, ಸ್ವರ ನಿನಾದ ತಂಡದಿAದ ಜಾಗೋ ಹಿಂದುಸ್ಥಾನಿ, ಗ್ರಾಮದೇವಿ ಮಹಿಳಾ ಮಂಡಳದಿAದ ಸಂಗೀತ ಲಹರಿ ಜನಮನ ಗೆದ್ದವು.