ಕೋಟೆನಗರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದು ಪರ ಸಂಘಟನೆಗಳ ಕಾರ್ಯಾಕರ್ತರು ಬೈಕ್ ರ‍್ಯಾಲಿ ನಡೆಯಿತು. 
ಜಿಲ್ಲೆ

ಕೋಟೆನಗರಲ್ಲಿ ಬೈಕ್ ರ‍್ಯಾಲಿ

ಬಾಗಲಕೋಟೆ: ಆರ್‌ಎಸ್‌ಎಸ್ ನಗರ ವಾರ್ಷಿಕೋತ್ಸವದ ಪಥ ಸಂಚಲನ ಹಿನ್ನಲೆಯಲ್ಲಿ ಕೋಟೆನಗರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದು ಪರ ಸಂಘಟನೆಗಳ ಕಾರ್ಯಾಕರ್ತರು ಬೈಕ್ ರ‍್ಯಾಲಿ ನಡೆಯಿತು.
ನಗರದ ಬಿವಿವಿ ಸಂಘದ ಬೀಳೂರು ಗುರುಬಸವ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿಗೆ ಆರ್‌ಎಸ್‌ಎಸ್ ಪ್ರಮುಖ ಡಾ.ಸಿ.ಎಸ್.ಪಾಟೀಲ ಚಾಲನೆ ನೀಡಿದರು. ನಂತರ ಬೈಕ್ ರ‍್ಯಾಲಿಯು ಶಿರೂರ ಅಗಸಿ, ಅಡತ ಬಜಾರ, ವಲ್ಲಭಬಾಯಿ ವೃತ್ತ, ಎಂ.ಜಿ.ರಸ್ತೆ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಹಳೇ ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ವಿದ್ಯಾಗಿರಿ, ಕಾಲೇಜು ವೃತ್ತ, ನವನಗರ ಎಲ್‌ಐಸಿ ವೃತ್ತ, ಎಪಿಎಂಸಿ ವೃತ್ತ, ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧೆಡೆ ರ‍್ಯಾಲಿಯು ಸಾಗಿತು. ಈ ವೇಳೆ ಭಾರತ ಮಾತಾಕೀ ಜೈ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಣ್ಣ ಕುಪ್ಪಸ್ತ, ವಿಜಯ ಸುಲಾಖೆ, ರಾಜು ಗವಳಿ, ಸತ್ಯನಾರಾಯಣ ಹೇಮಾದ್ರಿ, ಉಮೇಶ ಪಡಸಲಗಿ ಸೇರಿದಂತೆ ಇತರರು ಇದ್ದರು.