ಜಿಲ್ಲೆ

ಕೋಟೆ ನಗರಿ ಚಿತ್ರದುರ್ಗದಲ್ಲಿ ಬೃಹತ್ ತಿರಂಗಾ ಯಾತ್ರೆ

ಚಿತ್ರದುರ್ಗ: ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಅಮಾನುಷ ದಾಳಿ ವಿರುದ್ಧ ಭಾರತದ ಆಪರೇಷನ್ ಸಿಂಧೂರದ ಯಶಸ್ಸಿನ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಸೈನಿಕರಿಗೆ ಅಭಿನಂದಿಸಲು ನಾಗರಿಕ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ‘ಯೋಧ ನಮನ’ದ ಅಂಗವಾಗಿ ನಗರದಲ್ಲಿ ಬೃ ಹತ್ ತಿರಂಗಾಯಾತ್ರೆ ಜರುಗಿತು. ಕನಕ ವೃತ್ತದಿಂದ ಆರಂಭವಾದ ಯಾತ್ರೆ ಸಂಗೋಳ್ಳಿರಾಯಣ್ಣ ವೃತ್ತ,ಗಾಂಧಿ ವೃತ್ತ,ಎಸ್‌ಬಿಐ ವೃತ್ತ ಜೈನ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತ,ಮದಕರಿ ನಾಯಕರ ವೃತ್ತದ ಮೂಲಕ ವೀರ ವನಿತೆ ಒನಕೆ ಓಬವ್ವ ವೃತ್ತದ ಬಳಿ ಸಮಾವೇಶಗೊಂ ಡಿತು.

ನಾಗರಿಕರು,ನಿವೃತ್ತ ಯೋಧರು,ವೈದ್ಯರು,ವಕೀಲರು,ವಿದ್ಯಾರ್ಥಿಗಳು,ವಾಹನ ಚಾಲಕರು,ವಿವಿಧ ಸಂಘ-ಸಂಸ್ಥೆಗಳು,ನಾನಾ ಸಮಾ ಜಗಳ ಸದಸ್ಯರ ಸಹಿತ ಸಾವಿರಾರು ಜನರಿದ್ದ ಯಾತ್ರೆಯಲ್ಲಿ ಭಾರತ,ವೀರ ಯೋಧರು,ಆಪರೇಷನ್‌ಸಿಂಧೂರ ಪರ ಜಯ ಘೋಷಗಳು ಮೊಳಗಿದವು.

ಮೊಳಕಾಲ್ಮೂರಿನ ಹರೀಶ್ ತಂಡ ಸಿದ್ಧಪಡಿಸಿದ್ದ 8 ಅಡಿ ಅಗಲ ಹಾಗೂ ಒಂದು ಕಿ.ಮಿ.ಉದ್ದದ ತ್ರಿವರ್ಣ ಧ್ವಜ,ನೂರಾರು ಸಂಖ್ಯೆಯ ರಾಷ್ಟ್ರಧ್ವಜಗಳು ರಾರಾಜಿಸಿದವು.ನಾಗರಾಜ್‌ಬೇದ್ರೆ ಅವರ 10 ಕಲಾವಿದರ ತಂಡದ ಯಾತ್ರೆಯಲ್ಲಿ ಭಾಗವಹಿಸಿದ್ದವರ ಕೈ ಮತ್ತು ಕೆನ್ನೆ ಮೇ ಲೆ ತ್ರಿವರ್ಣ ಧ್ವಜದ ಚಿತ್ರ ರಚಿಸಿದರು. ದೇಶ ಭಕ್ತಿಗೀತೆಗಳು ಮೊಳಗಿದವು.ಭಾರತ ಮಾತೆ,ಪ್ರಧಾನಿ ನರೇಂದ್ರ ಮೋದಿ,ಭೂ,ವಾಯು ಹಾಗೂ ನೌಕಪ ಡೆ ಮುಖ್ಯಸ್ಥರ ಹಾಗೂ ಆಕಾಶ್,ಬ್ರಹ್ಮೋಸ್ ಭಾವ ಚಿತ್ರಗಳು ಗಮನ ಸೆಳೆದವು.

ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ,ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದಸ್ವಾಮೀಜಿ,ಸಂಸದ ಗೋವಿಂದ ಎಂ.ಕಾರಜೋಳ,ಶಾಸಕ ಡಾ.ಎಂ.ಚಂದ್ರಪ್ಪ,ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಎಸ್.ಕೆ.ಬಸವರಾಜನ್,ಎಂಎಲ್‌ಸಿ ಕೆ. ಎಸ್.ನವೀನ್,ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌ ಡ,ಜಿ.ಎಸ್.ಅನಿತ್‌ಕುಮಾರ್,ಕೆ.ಟಿ.ಕುಮಾರಸ್ವಾಮಿ,ಜಯಪಾಲಯ್ಯ,ಕುಡಾ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ,ಸುರೇಶ್,ಸಿದ್ದಾಪುರ ಸು ರೇಶ್,ಬದ್ರಿನಾಥ್,ನಗರಸಭೆ ಸದಸ್ಯರಾದ ಸುರೇಶ್,ಹರೀಶ್,ಶ್ರೀನಿವಾಸ್ ಹಾಗೂ ಡಾ.ಮಂಜುನಾಥ್,ರುದ್ರೇಶ್,ರಾಜಕುಮಾರ್,ತಿ ಪ್ಪೇಶ್,ಛಲವಾದಿ ತಿಪ್ಪೇಸ್ವಾಮಿ,ಕೋಗುಂಡೆ ದ್ಯಾಮಣ್ಣ,ಸತ್ಯನಾರಾಯಣಶೆಟ್ಟಿ,ದಗ್ಗೆಶಿವಪ್ರಕಾಶ್,ಶೈಲಜಾರೆಡ್ಡಿ,ನವೀನ್ ಚಾಲುಕ್ಯ,ಆರ್. ಸತ್ಯಣ್ಣ,ಸಂಪತ್‌ಕುಮಾರ್,ಎನ್.ಆರ್.ರಾಜಕುಮಾರ್ ಇತರರು ಇದ್ದರು.

---

ಸೇನೆ ಸೇರ್ಪಡೆ ಕಡ್ಡಾಯಕ್ಕೆ ಸೇವಾಲಾಲ್ ಶ್ರೀ ಒತ್ತಾಯ

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ,ರಕ್ಷಣೆಗಾಗಿ ದೇಶದ ಪ್ರತಿ ಮನೆಯಿಂದ ಒಬ್ಬರು ಸೇನೆ ಸೇರುವುದನ್ನು ಸರ್ಕಾರಗಳು ಕಡ್ಡಾಯ ಗೊಳಿಸ ಬೇಕೆಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ,26 ಮಂದಿ ಅಮಾಯಕರನ್ನು ಬ ಲಿ ತೆಗೆದುಕೊಂಡಿದ್ದ ಉಗ್ರರ ಕೃತ್ಯದ ಪ್ರತೀಕಾರವಾಗಿ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ. ಭಾರತ ಜಗತ್ತಿಗೆ ತಾಯಿ ಬೇರಿದ್ದಂತೆ. ನಾವು ಬೇರೆಯವರ ಧ್ವೇಷ,ದಬ್ಬಾಳಿಕೆ ಮಾಡುವುದಿಲ್ಲ. ಬುದ್ದ,ಬಸವ ಅವರಂತಹ ಮಹಾನ್ ದಾರ್ಶನಿಕರು,ಶರಣ ರು,ಸಂತರು,ಮಹಾತ್ಮರು,ಶಿವಾಜಿಮಹಾರಾಜರು,ರಾಣಾಪ್ರತಾಪ್‌ಸಿಂಗ್,ಪೃಥ್ವಿರಾಜ್ ಚವ್ಹಾಣ್ ಮೊದಲಾದ ವೀರಪುರುಷರು ಜನಿಸಿದ ದೇಶ ನಮ್ಮದು.

ಇಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ.ದೇಶದ್ರೋಹಿ,ಧರ್ಮದ್ರೋಹಿಗಳಿಗೆ ತಕ್ಕ ಶಿಕ್ಷೆಯಾ ಗುತ್ತದೆ.ಭಾರತವನ್ನು ಕೆಣಕಿದ ಪಾಪಿ ಪಾಕಿ ಸ್ತಾನ ಈಗ ತಿಣುಕುತ್ತಿದೆ. ಭಾರತವನ್ನು ಮುಟ್ಟಿದವರು ಸರ್ವನಾಶವಾಗುತ್ತಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ 140 ಕೋಟಿ ಜನರ ರಕ್ತ ಕು ದಿಯುತ್ತದೆ. ಅವಕಾಶ ಸಿಕ್ಕರೆ ಗನ್‌ಹಿಡಿದು ನಾನು ಗಡಿಯಲ್ಲಿ ದೇಶ ಕಾಯುವುದಾಗಿ ಹೇಳಿದರು. ಮಕ್ಕಳನ್ನು ಇಂಜಿನಿಯರ್,ಡಾಕ್ಟರ್ ಎಂದಾಗ ಬೇಕೆಂದು ಬಯಸಿದ ಸೈನಿಕನಾಗಲಿ ಎಂದು ಆಶಿಸುವಂತೆ ಪಾಲಕರಿಗೆ ಮನವಿ ಮಾಡಿದರು.

ಮೊಳಕಾಲ್ಮೂರಿನ ನಿವೃತ್ತ ಯೋಧ ಹವಾಲ್ದಾರ್ ಸೂರಯ್ಯ ಅವರು ಮಾತನಾಡಿ,1965,1971,1999, 2001, 2016ರಲ್ಲಿ ನಡೆಸಿದ ಪಾಕ್ ದಾಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಪಾಕ್‌ಒಳಗೆ ನುಗ್ಗಿ ಭಯೋತ್ಪಾದಕರನ್ನು ಬಗ್ಗ್ಗು ಬಡೆದಿರುವ ದೇಶ ನಮ್ಮದು. ಆಪ ರೇಷನ್ ಸಿಂಧೂರದಿಂದ ನಮ್ಮ ಸೇನೆ ಗೌರವ ಜಾಸ್ತಿಯಾಗಿದೆ. ಪ್ರತಿ ಪ್ರಜೆಯೂ ಸೈನಿಕರಾಗಿ ಹೊರ ಹೊಮ್ಮ ಬೇಕೆಂದರು.

ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮಣ್ ಮಾತನಾಡಿ,ಕರ್ನಲ್ ಸೋಫಿಯಾ ಖುರೇಷಿ,ಕಮಾಂಡರ್ ವ್ಯೆಮಿಕಾಸಿಂಗ್ ಆಪ ರೇಷನ್ ಸಿಂಧೂರದ ಮುಂದಾಳತ್ವ ವಹಿಸಿ ಪಾಕ್ ನೆಲದಲ್ಲಿ ಭಯೋತ್ಪಾದಕರನ್ನು ಸದೆ ಬಡಿದಿದ್ದಾರೆ. ಅಹಲ್ಯಾಬಾಯಿ ಹೋಳ್ಕರ್,ಕೆಳದಿ ಚೆನ್ನಮ್ಮ,ರಾಣಿಅಬ್ಬಕ್ಕ,ಒನಕೆ ಓಬವ್ವ ಅವರಂಥ ದಿಟ್ಟ ಮಹಿಳೆಯರ ನಾಡಿದು ಎಂದರು.

ಮುಖ್ಯಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ್ಯ ಪ್ರಮುಖ ಯಾದವ ಕೃಷ್ಣ,ಪಾಕಿಸ್ತಾನವನ್ನು ಬಗ್ಗು ಬಡಿಯು ವಲ್ಲಿ ನಿರ್ಣಾಯಕ ಹಂತಕ್ಕೆ ನಾವೀಗ ಬಂದು ನಿಂತಿದ್ದೇವೆ. ಭಾರತವನ್ನು ದ್ವೇಷಿಸುವುದೇ ಪಾಕ್ ಬಳಿಯಿರುವ ಅಸ್ತ್ರ. ದೇಶ ರಕ್ಷಣೆಯಲ್ಲಿ ವಿ ಜ್ಞಾನಿಗಳ ಕೊಡುಗೆ ಕೂಡ ಆಪಾರವಾಗಿದೆ. ನಮ್ಮ ಸೈನ್ಯದ ತಾಕತ್ತು ಏನೆಂದು ಪ್ರಪಂಚಕ್ಕೆ ಗೊತ್ತಾಗಿದೆ.

ಆಧುನಿಕ ಯುದ್ಧ ಹೇಗಿರುತ್ತದೆ ಎಂಬುದನ್ನು ನಮ್ಮ ಯೋಧರು ಜಗತ್ತಿಗೆ ತೋರಿಸಿ ಮಾದರಿಯಾಗಿದ್ದಾರೆ. ನೂರಾರು ಬಾರಿ ನಮ್ಮ ಸೈನಿಕರು ಪರಾಕ್ರಮ ತೋರಿಸಿದ್ದಾರೆ. ಅದಕ್ಕಾಗಿ ಅಬಾರಿಗಳಾಗಿರೋಣ. ಆಪೇಷನ್ ಸಿಂಧೂರ ಇನ್ನು ನಿಂತಿಲ್ಲವೆಂದರು. ಆರ್‌ಎಸ್‌ಎಸ್ ಜಿಲ್ಲಾ ಕಾರ‌್ಯವಾಹ ರಾಮ್‌ಕಿರಣ್ ಸ್ವಾಗತಿಸಿದರು.