ಭದ್ರಾವತಿ ಹಳೇನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಕೋಟೆ ಆಂಜನೇಯಸ್ವಾಮಿ ಮಹಾ ರಥೋತ್ಸವ. 
ಜಿಲ್ಲೆ

ಕೋಟೆ ಆಂಜನೇಯಸ್ವಾಮಿ ರಥೋತ್ಸವ

ಭದ್ರಾವತಿ: ಹಳೇನಗರದ ಕಂಚಿನ ಬಾಗಿಲು ಕೋಟೆ ಆಂಜನೇಯಸ್ವಾಮಿ ದೇವರ ಮಹಾ ರಥೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು.

ನವಗ್ರಹ ಹೋಮ, ರಥಶುದ್ಧೀಕರಣ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಅಲಂಕೃತ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಭಕ್ತರ ಜೈಕಾರದೊಂದಿಗೆ ರಥವನ್ನು ಎಳೆಯಲಾಯಿತು. ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡಿದರು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಕಾಳುಮೆಣಸು, ಬಾಳೆಹಣ್ಣುಗಳನ್ನು ರಥಕ್ಕೆ ಎಸೆದರು. ನಾದಸ್ವರ, ಚಂಡೆವಾದ್ಯಗಳು ಮೆರುಗು ನೀಡಿದವು. ರಥವನ್ನು ರಂಗಪ್ಪವೃತ್ತದವರೆಗೆ ಎಳೆಯಲಾಯಿತು. ಭಕ್ತರಿಗೆ ಪಾನಕ, ಕೋಸುಂಬರಿ ವಿತರಿಸಲಾಯಿತು. 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಯಾಗಶಾಲೆಯನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ಪೌರಾಯುಕ್ತ ಪರುಸಪ್ಪ ಕುರುಬರ, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಬಿ.ಟಿ.ನಾಗರಾಜ್, ಶಿವಣ್ಣ ಗೌಡ, ಚನ್ನೇಶ್ ಇತರರಿದ್ದರು.