ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕೋಚರಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಮಪ್ಪ ಚೌಗಲಾ, ಉಪಾಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಽಕಾರಿ ಆರ್.ಬಿ.ಪಾಟೀಲ ಘೋಷಿಸಿದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರನ್ನು ಸತ್ಕರಿಸಲಾಯಿತು.
ಸದಸ್ಯರಾದ ಬಸಲಿಂಗ ನಾಯಿಕ, ಮಲ್ಲಪ್ಪ ನಾಯಿಕ, ವಿರೂಪಾಕ್ಷಿ ನಾಯಿಕ, ಮಲಗೌಡ ಪಾಟೀಲ, ಮಲ್ಲಪ್ಪ ಚೌಗಲಾ, ಗಂಗವ್ವ ಮಗದುಮ್ಮ, ವಾಶಪ್ಪ ಕುರಬರ, ರವಿಂದ್ರ ತಳವಾರ, ಶಿವಪ್ಪ ಮತ್ತಿವಾಡ, ಶಿವಲಿಂಗ ನಾಯಿಕ, ವ್ಯವಸ್ಥಾಪಕ ಬಸವರಾಜ ನರಗುಂದಿ ಇತರರಿದ್ದರು.