ಜಿಲ್ಲೆ

ಕೋಕೇರಿ-ಕೊಳಕೇರಿ ರಸ್ತೆ ಕಾಮಗಾರಿಗೆ ಚಾಲನೆ

ನಾಪೋಕ್ಲು: ಹಲವು ವರ್ಷಗಳಿಂದ ಡಾಂಬರು ಕಾಣದೆ ದುಸ್ಥಿತಿಯಲ್ಲಿದ್ದ ಕೋಕೇರಿ-ಕೊಳಕೇರಿ ಸಂಪರ್ಕ ರಸ್ತೆಯ ಕಾಮಗಾರಿಗೆ ಚಾಲನೆ ದೊರೆತಿದೆ.

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಕಾಮಗಾರಿ ಪ್ರಾರಂಭಗೊಳ್ಳದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಶನಿವಾರ ಕಾಮಗಾರಿಗೆ ಚಾಲನೆ ನೀಡಿದರು.

ಎ.ಕೆ.ಹಾರಿಸ್, ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್. ಕೆ.ವೈ.ಇಬ್ರಾಹಿಂ, ಮೊಯಿದು, ಸಿ.ಎ.ಮೈಮೂದ್ ಇತರರಿದ್ದರು.

--------------

23-ಎನ್ ಪಿ ಕೆ-1.

ಕೋಕೇರಿ - ಕೊಳಕೇರಿ ಸಂಪರ್ಕ ರಸ್ತೆಯ ಕಾಮಗಾರಿಗೆ ಪ್ರಾರಂಭ (ಚಾಲನೆ)