ಕಾರವಾರ: ಜಿಲ್ಲೆಯಲ್ಲಿ ಒಂದೇ ದಿನ 455 ಜನ ಕೋವಿಡ್ನಿಂದ ಗುಣವಾಗಿದ್ದು, 158 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. 7 ಜನ ಮೃತಪಟ್ಟಿದ್ದಾರೆ.
ಅಂಕೋಲಾದಲ್ಲಿ 15, ಕುಮಟಾದಲ್ಲಿ 45, ಹೊನ್ನಾವರದಲ್ಲಿ 47, ಭಟ್ಕಳದಲ್ಲಿ 45, ಶಿರಸಿಯಲ್ಲಿ 213, ಸಿದ್ದಾಪುರದಲ್ಲಿ 21, ಯಲ್ಲಾಪುರದಲ್ಲಿ 51, ಮುಂಡಗೋಡಿನಲ್ಲಿ 16, ಹಳಿಯಾಳದಲ್ಲಿ 2 ಜನರು ಗುಣವಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಕರೊನಾ ಸೋಂಕು ಮುಕ್ತರಾದವರ ಸಂಖ್ಯೆ 6491 ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ 45, ಅಂಕೋಲಾದಲ್ಲಿ 10, ಕುಮಟಾದಲ್ಲಿ 15, ಶಿರಸಿಯಲ್ಲಿ 7, ಯಲ್ಲಾಪುರದಲ್ಲಿ 6, ಮುಂಡಗೋಡಿನಲ್ಲಿ 59, ಹಳಿಯಾಳದಲ್ಲಿ 13, ಜೊಯಿಡಾದಲ್ಲಿ 3 ಜನರಿಗೆ ಹೊಸದಾಗಿ ಕರೊನಾ ಇರುವುದು ಖಚಿತವಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 8555 ಕ್ಕೆ ಏರಿಕೆಯಾಗಿದ್ದು, 1954 ಸಕ್ರಿಯ ಪ್ರಕರಣಗಳಿವೆ. ಕಾರವಾರ 2, ಅಂಕೋಲಾ1, ಕುಮಟಾ 3, ಹಳಿಯಾಳದಲ್ಲಿ 1 ಸೇರಿ 7 ಜನ ಕರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಮೃತರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ.