ಕೊಳ್ಳೇಗಾಲ ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಚೇರಿಯ ಶನಿವಾರ ಶಾಸಕ ಎನ್.ಮಹೇಶ್ ಸಮ್ಮುಖದಲ್ಲಿ 20ಕ್ಕೂ ಮಂದಿ ಬಿಜೆಪಿ ಸೇರ್ಪಡೆಗೊಂಡರು. ಎಸ್.ಮಹೇಂದರ್, ರಮೇಶ್ ಮೂರಾರಿ, ಶಿವಕುಮಾರ್, ರಾಜೇಗೌಡ, ಶಂಕರ್, ಚಿಂತು ಪರಮೇಶ್ ಮತ್ತಿತರಿದ್ದರು. 
ಜಿಲ್ಲೆ

ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿ ಇಲ್ಲ

ಕೊಳ್ಳೇಗಾಲ: ಕ್ಷೇತ್ರದಲ್ಲಿ ಈ ಬಾರಿ ಜನತೆ ಬಿಜೆಪಿ ಪರವಾಗಿದ್ದು, ಪ್ರತಿಸ್ಪರ್ಧಿಯಿಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ಪಟ್ಟಣದ ಗಾಯತ್ರಿ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಬಸವ ದೇವಲ ಮಹರ್ಷಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದರು.
ನನಗೆ ಸಿಕ್ಕಿರುವ ಅವಕಾಶ ಬಳಸಿಕೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಂದು ಅವಕಾಶಕ್ಕಾಗಿ ಚುನಾವಣೆಗೆ ನಿಂತಿದ್ದೇನೆ. ಈ ಬಾರಿ ಜನರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಪ್ರಚಾರ ಸಮಯದಲ್ಲಿ ತಿಳಿಯುತ್ತಿದೆ. ಯಳಂದೂರು ಭಾಗದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಾಗಾರ ನಡೆಸಿದ್ದೇವೆ. 30 ಗ್ರಾಮ ಪಂಚಾಯಿತಿಗಳಲ್ಲೂ ಬಿರುಸಿನ ಪ್ರಚಾರ ನಡೆಸಲಾಗಿದೆ. ಮತ ಸೆಳೆಯುವ ಚುನಾವಣಾ ತಂತ್ರಗಾರಿಕೆ ಹಾಗೂ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟುಕೊಂಡು ಮತಕ್ಕಾಗಿ ಮನವಿ ಮಾಡಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದು, ನಟ ಸುದೀಪ್ ಅವರನ್ನು ಒಂದು ದಿನದ ಮಟ್ಟಿಗೆ ಪ್ರಚಾರಕ್ಕಾಗಿ ಕಳುಹಿಸಿಕೊಡಲು ಕೇಳಿಕೊಂಡಿದ್ದೇನೆ. ಸುದೀಪ್ ಅವರು ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಸ್.ಮಹೇಂದರ್ ಮಾತನಾಡಿ, ಇಡೀ ಭಾರತದಲ್ಲೇ ಬಿಜೆಪಿ ಇದೆ. ರಾಷ್ಟ್ರ ಹಾಗೂ ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಗೆಲ್ಲಿಸಬೇಕಾದ ಅವಶ್ಯಕತೆ ಇದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ರಮೇಶ್ ಮೂರಾರಿ, ಕಾರ್ಯದರ್ಶಿ ಶಿವಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ನಟ ರಾಜೇಗೌಡ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಂಕರ್, ಚಿಂತು ಪರಮೇಶ್ ಮತ್ತಿತರರಿದ್ದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಶಾಸಕ ಎನ್.ಮಹೇಶ್ ಸಮ್ಮುಖದಲ್ಲಿ ಯಳಂದೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಸ್ತೂರು ರಂಗಸ್ವಾಮಿ, ನಿಂಗರಾಜು, ಕುಮಾರ್, ಕೆಂಪರಾಜು, ನಂಜುಂಡಸ್ವಾಮಿ, ಗೋಪಾಲ್ ರಾಜ್, ರಂಜನ್ ಕುಮಾರ್ ಲಿಂಗಣಾಪುರ, ಪುನೀತ್, ಸಂತೋಷ್, ಚೇತನ್, ಸನತ್, ಜಗದೀಶ್, ಶರತ್ ಸೇರ್ಪಡೆಗೊಂಡರು.