ನಿಪ್ಪಾಣಿ ಆಂದೋಲನ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ಜಯವಂತ ಭಾಟಲೆ, ರಂಜನಾ ಇಂಗವಲೆ, ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ ಇತರರಿದ್ದರು. 
ಜಿಲ್ಲೆ

ಕೊಳೆಗೇರಿ ಪ್ರದೇಶ ಅಭಿವೃದ್ಧಿಗೆ ಒತ್ತು

ನಿಪ್ಪಾಣಿ: ನಗರದ ಕೊಳೆಗೇರಿ ಪ್ರದೇಶಗಳಲ್ಲಿರುವ ಸಮಸ್ಯೆ ಪರಿಹರಿಸಲು ಮತ್ತು ನಾಗರಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಸ್ಥಳೀಯ ಕೊಳೆಗೇರಿ ಪ್ರದೇಶಗಳಿಗೆ 1 ಕೋಟಿ ರೂ.ಅನುದಾನ ತಂದಿದ್ದೇವೆ ಎಂದು ಶಾಸಕಿ ಶಶಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಆಂದೋಲನ ನಗರದಲ್ಲಿ ಕೆಎಸ್‌ಡಿಬಿ ಇಲಾಖೆಯಿಂದ 30 ಲಕ್ಷ ರೂ.ಅನುದಾನದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಗರದ ಕೊಳೆಗೇರಿ ಪ್ರದೇಶಗಳ ಸಂಖ್ಯೆಯನ್ನು 4 ರಿಂದ 8ಕ್ಕೆ ಹೆಚ್ಚಿಸಿ ಸುಧಾರಣೆ ಕಾರ್ಯ ಕೈಗೊಂಡಿದ್ದೇವೆ ಎಂದರು. ರವಿ ಇಂಗವಲೆ ಮಾತನಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ರಾಜೇಂದ್ರ ಗುಂದೇಶಾ, ಸದಸ್ಯ ಸಂತೋಷ ಸಾಂಗಾವಕರ, ಪ್ರಣವ ಮಾನವಿ, ಬಂಡಾ ಘೋರ್ಪಡೆ, ರಮೇಶ ವೈದ್ಯ, ರವಿ ಇಂಗವಲೆ, ದಿಲೀಪ ಕಾಂಬಳೆ, ಸಂಜಯ ಜಂಗಿ, ದತ್ತಾ ಜೋತ್ರೆ, ಮಹೇಶ ಸೂರ್ಯವಂಶಿ, ರವೀಂದ್ರ ಕದಂ, ವಿಜಯ ಢವಳೆ, ವಿಶ್ವನಾಥ ಜಾಧವ, ಪ್ರಶಾಂತ ಕೇಸ್ತಿ ಇತರರಿದ್ದರು.