ಸಂಬರಗಿ: ಸಮೀಪದ ಮಧಬಾವಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದಲ್ಲಿದ್ದರೂ ಶಾಸಕರು ತಾರತಮ್ಯ ಮಾಡದೇ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಮಹಾದೇವ ಕೋರೆ ಹೇಳಿದರು.
ಸಮೀಪದ ಮಧಬಾವಿ ಗ್ರಾಮದ ವಾರ್ಡ್ ನಂ.೩ರಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಈಚೆಗೆ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಜಲಜೀವನ್ ಮಿಷನ್, ಶುದ್ಧ ನೀರಿನ ಘಟಕ, ಬೀದಿದೀಪ, ಒಳಚರಂಡಿ, ಸಿಸಿ ರಸ್ತೆ ಸೇರಿ ಅನೇಕ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಬಡ ಕುಟುಂಬಗಳಿಗೆ ಸರ್ಕಾರದಿಂದ ವಿವಿಧ ವಸತಿ ಆದೇಶ ಪತ್ರ ವಿತರಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಾಯಕ ಬಾಗಡಿ ಮಾತನಾಡಿದರು.
ಪಿಕೆಪಿಎಸ್ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ್ಮ, ಅಶೋಕ ಪೂಜಾರಿ, ಗೋಪಾಲ ಅವಳೆ, ಲಕ್ಷ್ಮಣ ಅವಾಲೆ, ವಿಠ್ಠಲ ಅವಾಲೆ, ಸದಾಶಿವ ಅವಾಲೆ, ಅಶೋಕ ಸೂರ್ಯವಂಶಿ, ಪ್ರವೀಣ ಭಂಡಾರೆ, ಅಪ್ಪಾಸಾಹೇಬ ಅವಾಲೆ, ಬಸವರಾಜ ರಾಜಮನೆ ಇತರರಿದ್ದರು.