ಕಾಗವಾಡ: ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಚೈತಾಲಿ ಕಿರಣಗಿ ಅವರನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಪ್ರತಿಭಟಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಉಪತಹಸೀಲ್ದಾರ್ ರಶ್ಮಿ ಜಕಾತಿಗೆ ಗುರುವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ, ಗರ್ಭಿಣಿಯನ್ನು ಪತಿ ಪ್ರದೀಪ ಕಿರಣಗಿ ಹಾಗೂ ಸಹಚರರು ಹತ್ಯೆ ಮಾಡಿ ಅಪಘಾತ ಎಂಬಂತೆ ಬಿಂಬಿಸಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೃತ ಚೈತಾಲಿ ತಂದೆ ಅಣ್ಣಾಸಾಹೇಬ ಮಾಳಿ ಮಾತನಾಡಿ, ಮಗಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಮೋಹನ ಶಾ., ಮುಖಂಡರಾದ ವಸಂತ ಖೋತ, ಅಮೀನ್ ಶೇಖ್, ಬಾಬು ಅಕ್ಕಿವಾಟೆ, ವಜ್ರಕುಮಾರ ಮಗದುಮ್ಮ, ಸಚಿನ ಪೂಜಾರಿ, ಅಣ್ಣಾಸಾಹೇಬ ಖೋತ, ಪಿಂಟು ಸಮಗಾರ, ಮುರುಗೇಶ ಕುಂಬಾರ, ಸಂದೀಪ ಖೋತ ಇತರರಿದ್ದರು