ಜಿಲ್ಲೆ

ಕೊಲೆಗೆ ಯತ್ನಿಸಿದ ಇಬ್ಬರ ಬಂಧನ

ಬೆಳಗಾವಿ: ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ವ್ಯಕ್ತಿಯೋರ್ವನನ್ನು ಕೊಲೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಿಲಕವಾಡಿ ನಿವಾಸಿಗಳಾದ ಮನೋಜ ರಮೇಶ ಜಾದವ(38) ,ರಾಹುಲ್​ ಮೋಹನ ಬಾಟಿಯಾ(35) ಬಂಧಿತ ಆರೋಪಿಗಳು. ಗಣೇಶಪುರ ನಿವಾಸಿ ದಿಲೀಪ್​ ರಾಮಸಿಂಗ್​ ಠಾಕೂರ (41) ಹಲ್ಲೆಗೊಳಗಾದ ವ್ಯಕ್ತಿ.

ಆರೋಪಿತರು ನಗರದ ಆರ್​ಪಿಡಿ ಕ್ರಾಸ್​ ಬಳಿ ದಿಲೀಪ್​ನ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲೀಪ್​ನ ಪತ್ನಿ ತಿಲಕವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.