ಜಿಲ್ಲೆ

ಕೊಲೆ ಮಾಡಿ ಪರಾರಿಯಾಗಿದ್ದ ಅಪ್ರಾಪ್ತರ ಬಂಧನ

ಕೊಲೆ ಮಾಡಿ ಪರಾರಿಯಾಗಿದ್ದ ಅಪ್ರಾಪ್ತರ ಬಂಧನ

ಬೆಳಗಾವಿ : ತಾಲೂಕಿನ ಕಾಕತಿ ಗ್ರಾಮದಲ್ಲಿ ಈಚೆಗೆ ನಡೆದ ಕೊಲೆ ಪ್ರಕರಣ ಸಂಭಂಧಿಸಿದಂತೆ ಕೊಲೆ ಮಾಡಿ ಪರಾರಿ ಆಗಿದ್ದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾಕತಿಯ ಮಾನ್ವಿಕಾ ಎಂಟರ್ಪ್ರೈಸಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮುಕೇಶಕುಮಾರ ಶಂಕರ ಪಾಂಢೆ( 34) ಎಂಬುವವರನ್ನು ಅದೇ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತರು ಕ್ಷುಲಕ ಕಾರಣಕ್ಕೆ ಕೊಲೆಯಾದ ವ್ಯಕ್ತಿಯ ಜತೆಗೆ ಜಗಳ ಮಾಡಿಕೊಂಡಿದ್ದರು.ಇದೇ ಕಾರಣಕ್ಕೆ ಆರೋಪಿಗಳು ಆ.7 ರಂದು ಮುಕೇಶಕುಮಾರನ ತಲೆಗೆ ಕಬ್ಬಿನ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಕೊಲೆ ಮಾಡಿ ಪರಾರಿಯಾಗಿದ್ದ ಬಾಲಕರ ಜಾಡು ಹಿಡಿದ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ಉತ್ತರ ಪ್ರದೇಶದ ಅಲಿಘರ ಜಿಲ್ಲೆಯಲ್ಲಿ ಓರ್ವ ಹಾಗೂ ಕಾಕತಿಯಲ್ಲಿ ಮತ್ತೊರ್ವನ್ನು ವಶಕ್ಕೆ ಪಡೆದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.