ಜಿಲ್ಲೆ

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಏಳು ಆರೋಪಿಗಳ ಬಂಧನ

ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ನಡೆದಿದ್ದ ಸದಾಖತ್ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಇಟ್ಟಿಗೆಗೂಡಿನ ನಿವಾಸಿಗಳಾದ ನಿತಿನ್, ಧನುಷ್, ಭಾಸ್ಕರ್, ವಿಘ್ನೇಶ್, ಧನುಷ್, ಜಯಕುಮಾರ್, ಕಿರಣ್ ಬಂಧಿತ ಆರೋಪಿಗಳು.
ಕ್ಷುಲ್ಲಕ ಕಾರಣಕ್ಕೆ ಸದಾಖತ್, ಆತನ ಸ್ನೇಹಿತರಾದ ಹನೀಫ್, ನೌಶದ್ ಹಾಗೂ ಬಂಧಿತ ನಿತಿನ್ ಇನ್ನಿತರೆ ಆರೋಪಿಗಳ ನಡುವೆ ಮೂರು ದಿನಗಳ ಹಿಂದೆ ಗಲಾಟೆ ನಡೆದಿತ್ತು. ಈ ಬಗ್ಗೆ ಮಧ್ಯೆ ಪ್ರವೇಶಿಸಿದ ಪೊಲೀಸರು ರಾಜಿ ಮಾಡಿ ಕಳುಹಿಸಿದ್ದರು. ಆದರೆ ಇದೇ ದ್ವೇಷ ಇಟ್ಟುಕೊಂಡ ಬಂಧಿತ ಆರೋಪಿಗಳು, ಹನೀಫ್, ನೌಶದ್ ಮೂಲಕ ಸದಾಖತ್‌ನನ್ನು ಮಾತುಕತೆ ನಡೆಸುವ ನೆಪದಲ್ಲಿ ನಿತಿನ್ ಮತ್ತು ತಂಡ ಲಷ್ಕರ್ ಮೊಹಲ್ಲಾದ ಗುಜರಿ ಬಳಿ ಕರೆಸಿಕೊಂಡಿದೆ. ತಡರಾತ್ರಿ ಮಾತುಕತೆ ನಡೆಸುತ್ತಿದ್ದಂತೆಯೇ ನಿತಿನ್ ತಂಡ ಸದಾಖತ್ ಮೇಲೆ ಚಾಕುವಿನಿಂದ ಹೊಟೆಗೆ ಇರಿದಿದೆ. ಬಿಡಿಸಲು ಬಂದ ಹನೀಫ್, ನೌಶದ್ ಮೇಲೂ ದಾಳಿ ಮಾಡಿ ಪರಾರಿಯಾಗಿತ್ತು.
ತೀವ್ರಗಾಯಗೊಂಡ ಸದಾಖತ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಗಾಯಗೊಂಡಿರುವ ಹನೀಫ್, ನೌಶದ್ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಗಂಭೀರತೆ ಅರಿದ ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರು ತಂಡ ರಚಿಸಿದ್ದರು. ತಂಡದಲ್ಲಿದ್ದ
ಲಷ್ಕರ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್, ಆಲನಹಳ್ಳಿ ಠಾಣೆಯ ಶ್ರೀೀಕಾಂತ್, ನಜರಬಾದ್ ಠಾಣೆಯ ಜೀವನ್, ಉದಯಗಿರಿ ರಾಜು ಅವರ, ಎಸ್‌ಐಗಳಾದ ಗೌತಮ್‌ಗೌಡ, ಧನಲಕ್ಷ್ಮಿ, ಸುನೀಲ್ ತಂಡ ಆರೋಪಿಗಳನ್ನು ಬಂಧಿಸಿದೆ.